ಗುರು ಹಿರಿಯರಿಗೆ ಪವಿತ್ರ ಸ್ಥಾನ

P PURA VANDANE 27 (2)
Published on

ಪರಶುರಾಮಪುರ: ಭಾರತೀಯ ಸಂಸ್ಕೃತಿಯಲ್ಲಿ ಗುರು-ಹಿರಿಯರಿಗೆ ಅತ್ಯಂತ ಪವಿತ್ರವಾದ ಸ್ಥಾನವಿದೆ ಎಂದು ನಿವೃತ್ತ ಮುಖ್ಯಶಿಕ್ಷಕ ಸಿದ್ದಪ್ಪ ತಿಳಿಸಿದರು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳೇ ವಿದ್ಯಾರ್ಥಿಗಳು ತಾಲೂಕಿನ ಸೋಮಗುದ್ದು ಗ್ರಾಮದ ಸೋಮಲಿಂಗೇಶ್ವರ ಸಮುದಾಯ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಗುರು ನಮನ ಕಾರ್ಯಕ್ರಮದಲ್ಲಿ ಗೌರವ ಸಮರ್ಪಣೆ ಸ್ವೀಕರಿಸಿ ಮಾತನಾಡಿದರು.

ಆಧುನಿಕ ಕಾಲಘಟ್ಟದಲ್ಲೂ ಶಿಷ್ಯ ವರ್ಗ ಅಕ್ಷರ ಕಲಿಸಿದ ಗುರುಗಳಿಗೆ ನಮನ ಸಲ್ಲಿಸುತ್ತಿರುವುದು ಅತ್ಯಂತ ಮಾದರಿ ಕಾರ್ಯ ಎಂದರು.

ಮುಖ್ಯಶಿಕ್ಷಕ ಡಿ.ಬಸವರಾಜಪ್ಪ ಮಾತನಾಡಿದರು. ನಿವೃತ್ತ ಶಿಕ್ಷಕರಾದ ಮಸಿಯಪ್ಪ, ಬೈಲಪ್ಪ, ರೇವಣ್ಣ, ಶಿಕ್ಷಕರಾದ ಎಂ.ರುದ್ರಮುನಿಯಪ್ಪ, ಎಲ್.ಹನುಮಂತರಾಯ, ಗಿರಿಜಾ, ತಿಪ್ಪೇರುದ್ರಪ್ಪ, ಅಂಗನವಾಡಿ ಕಾರ್ಯಕರ್ತೆಯರಾದ ತಿಪ್ಪಮ್ಮ, ಸಿದ್ದಮ್ಮ, ಹಳೇ ವಿದ್ಯಾರ್ಥಿ ಸಂಘದ ಮಂಜುನಾಥಯ್ಯ, ರಮೇಶ, ಕುಮಾರಸ್ವಾಮಿ, ಸುಮಿತ್ರಾ, ನಾಗವೇಣಿ, ರಮಾದೇವಿ, ಮಂಜಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net