ಶುಚಿತ್ವದಿಂದ ಕಾಯಿಲೆ ದೂರ

P PURA CLEAANN 11
Published on

ಪರಶುರಾಮಪುರ: ಮನೆ, ಸುತ್ತಮುತ್ತಲಿನ ವಾತಾವರಣದ ಜತೆಗೆ ವೈಯಕ್ತಿಕ ಶುಚಿತ್ವಕ್ಕೆ ಆದ್ಯತೆ ನೀಡಿದರೆ ಮಹಾಮಾರಿ ಕರೊನಾ ವೈರಸ್‌ನಿಂದ ದೂರವಿರಬಹುದು ಎಂದು ಟಿ.ಎನ್. ಕೋಟೆ ಗ್ರಾಪಂ ಅಧ್ಯಕ್ಷ ಓ.ಬೈಲಪ್ಪ ತಿಳಿಸಿದರು.

ತಿಮ್ಮಣ್ಣನಾಯಕನೋಟೆ ಗ್ರಾಮದಲ್ಲಿ ಶನಿವಾರ ಸ್ಥಳೀಯ ಆಡಳಿತದಿಂದ ಆಯೋಜಿಸಿದ್ದ ಚರಂಡಿ ತ್ಯಾಜ್ಯ ವಿಲೇವಾರಿ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ಮನೆ ಬಾಗಿಲಿಗೆ ಬರುವ ಪಂಚಾಯಿತಿ ವಾಹನದಲ್ಲಿ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕಿಸಿ ಹಾಕಬೇಕು. ಇದರಿಂದ ಮಣ್ಣು, ನೀರು, ಗಾಳಿ, ಆಹಾರದ ಮಲಿನತೆ ತಡೆಯಬಹುದು. ಕಾಯಿಲೆ ಮುಕ್ತ ಜೀವನ ನಡೆಸಬಹುದು ಎಂದು ಸಲಹೆ ನೀಡಿದರು.

ತಾಪಂ ಸದಸ್ಯ ಕರಡಪ್ಪ, ಗ್ರಾಪಂ ಅಧ್ಯಕ್ಷ ಓ. ಬೈಲಪ್ಪ, ಉಪಾಧ್ಯಕ್ಷೆ ಶಿವಮ್ಮ, ಸದಸ್ಯೆ ಗೀತಾವಾಣಿ, ನಿಂಗಣ್ಣ, ಬಸವರಾಜು, ಭಾಗ್ಯಾ, ಗ್ರಾಪಂ ಪೌರಕಾರ್ಮಿಕರಾದ ಚಂದ್ರಣ್ಣ, ಜಯಣ್ಣ, ಮಂಜಣ್ಣ, ನಾಗರಾಜು, ಕರವಸೂಲಿಗಾರ ರಂಗನಾಥ, ಈರಣ್ಣ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net