ವೀರಾಂಜನೇಯ, ಈರಣ್ಣಸ್ವಾಮಿ ಜಾತ್ರೆ

P PURA PAARISHEEE 29. (2)
Published on

ಪರಶುರಾಮಪುರ: ಹೋಬಳಿಯ ವಡ್ಡೇಪಾಳ್ಯದಲ್ಲಿ ಶನಿವಾರ ಶ್ರೀ ಗುಡಿಬಂಡೆ ಪ್ರತ್ಯಕ್ಷ ವೀರಾಂಜನೇಯ ಸ್ವಾಮಿ ಹಾಗೂ ಈರಣ್ಣಸ್ವಾಮಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.

ಉತ್ಸವ ಮೂರ್ತಿಗಳನ್ನು ಆಂಧ್ರದ ಮಲಯನೂರಿನ ವಡ್ಡೇಪಾಳ್ಯಂ ನಿಂದ ಕಾಲುನಡಿಗೆಯಲ್ಲಿ ಹೊತ್ತು ತಂದು ಪರಶುರಾಮಪುರದ ವೇದಾವತಿ ನದಿಯಲ್ಲಿ ಗಂಗಾಪೂಜೆ ನೆರವೇರಿಸಲಾಯಿತು. ಸಂಜೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವರ ಮೆರವಣಿಗೆ ನಡೆಸಲಾಯಿತು.

ಶಾಸಕ ಟಿ.ರಘುಮೂರ್ತಿ, ತಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ, ಗ್ರಾಪಂ ಅಧ್ಯಕ್ಷ ಎಂ.ಆರ್.ರುದ್ರೇಶ, ಭಕ್ತರ ಸಂಘದವರಾದ ರವಿ, ಚನ್ನಕೇಶವ, ತಿಮ್ಮಯ್ಯ, ನಿಜಲಿಂಗಪ್ಪ, ಗೋವಿಂದಪ್ಪ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net