

ಪರಶುರಾಮಪುರ: ಹೋಬಳಿಯ ಟಿ.ಎನ್.ಕೋಟೆ ಹಾಗೂ ದೊಡ್ಡಬೀರನಹಳ್ಳಿ ಮುಖ್ಯ ರಸ್ತೆಗಳಿಗೆ ಕಳ್ಳೆ ಬಡಿದು ಯಾರೂ ಒಳ-ಹೊರ ಹೋಗದಂತೆ ಗ್ರಾಮಾಡಳಿತ ಆದೇಶ ಹೊರಡಿಸಿದೆ.
ಟಿ.ಎನ್.ಕೋಟೆ ಗ್ರಾಪಂ ಅಧ್ಯಕ್ಷ ಓ.ಬೈಲಪ್ಪ ಮಾತನಾಡಿ, ಬೆಂಗಳೂರು ಇನ್ನಿತರ ನಗರಗಳಿಂದ ಗ್ರಾಮಕ್ಕೆ ಬರುವವರಿಂದ ಸೋಂಕು ತಗುಲುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಪಂಚಾಯಿತಿ ವ್ಯಾಪ್ತಿಯ ಚೌಳೂರು ಮಾರ್ಗ, ಕೋನಿಗರಹಳ್ಳಿ ಮಾರ್ಗ, ದೊಡ್ಡಬೀರನಹಳ್ಳಿ ಮಾರ್ಗ, ಕೋಟೆ ಓಬಳಾಪುರ ಮುಖ್ಯ ರಸ್ತೆಗಳಿಗೆ ಬೇಲಿ ಹಾಕಿ ಪ್ರವೇಶ ನಿರ್ಬಂಧಿಸಲಾಗಿದ್ದು, ದಿನಪತ್ರಿಕೆ, ಹಾಲು, ಮೊಸರು, ಔಷಧ ಸರಬರಾಜು ಮಾಡುವವರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ ಎಂದರು.
ತಾಪಂ ಸದಸ್ಯ ಕರಡಪ್ಪ, ಉಪಾಧ್ಯಕ್ಷೆ ಶಿವಮ್ಮ, ಸದಸ್ಯರಾದ ನಿಂಗಣ್ಣ, ದೊಡ್ಡರಂಗಪ್ಪ, ಕೆಂಚಣ್ಣ, ಈರಣ್ಣ, ಗೀತಾವಾಣಿ, ಪೋಸ್ಟ್ ಸಿದ್ದೇಶಣ್ಣ, ಬಸವರಾಜು, ಭಾಗ್ಯಾ, ನಾಗೇಂದ್ರಪ್ಪ, ಹನುಮಂತರಾಯ ಬೇಲಿ ಹಾಕುವ ಕಾರ್ಯದಲ್ಲಿ ಪಾಲ್ಗೊಂಡಿದ್ದರು.