ಬ್ಯಾರೇಜ್‌ಗಳಿಗೆ ಬಾಗಿನ ಅರ್ಪಣೆ

P PURA BJP 01
Published on

ಪರಶುರಾಮಪುರ: ಹೋಬಳಿಯ ಕೋಟೆಕೆರೆ, ಹರವಿಗೊಂಡನಹಳ್ಳಿ, ಬೊಂಬೇರಹಳ್ಳಿ ಬ್ಯಾರೇಜ್‌ಗಳಿಗೆ ಜೂನ್ 2 ರಂದು ಸಂಸದ ಎ.ನಾರಾಯಣಸ್ವಾಮಿ ಹಾಗೂ ಸಚಿವ ಶ್ರೀರಾಮುಲು ಗಂಗಾಪೂಜೆ ಸಲ್ಲಿಸಿ ಬಾಗಿನ ಅರ್ಪಿಸುವರು ಎಂದು ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಚಳ್ಳಕೆರೆ ಬಾಳೆಕಾಯಿ ರಾಮದಾಸ ತಿಳಿಸಿದ್ದಾರೆ.

ಯರಗುಂಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ನಡೆದ ಚಳ್ಳಕೆರೆ ತಾಲೂಕು ಬಿಜೆಪಿ ಮಂಡಲ, ಹೋಬಳಿ ಕಾರ್ಯಕರ್ತರ ಸಮಾಲೋಚನಾ ಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿದರು.

ಮುಖಂಡರಾದ ಸೋಮಶೇಖರ ಮಂಡೀಮಠ, ಜೆ.ಒ.ಚನ್ನಕೇಶವ, ಶಿವಪುತ್ರಪ್ಪ, ಜೆ.ಒ.ಚನ್ನಕೇಶವ, ಸಿ.ಎಸ್.ಪ್ರಕಾಶ, ಬಿ.ತಿಪ್ಪೇಸ್ವಾಮಿ, ಡಿವಿಕೆ ಸ್ವಾಮಿ, ರಾಮೇಗೌಡ, ಸಿದ್ದೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net