ಸರ್ಕಾರದ ಆದೇಶ ಪಾಲಿಸಲು ಸೂಚನೆ

P PURA KRAMA 19 (1)
Published on

ಪರಶುರಾಮಪುರ: ಸರ್ಕಾರ ಸೂಚಿಸುವ ನಿಯಮಗಳನ್ನು ದಿನಸಿ ಅಂಗಡಿ ವರ್ತಕರು ಉಲ್ಲಂಘಿಸಿದರೆ ಕ್ರಮಕೈಗೊಳ್ಳಲಾಗುವುದು ಎಂದು ಪಿಎಸ್‌ಐ ಮಹೇಶ ಹೊಸಕೋಟೆ ಎಚ್ಚರಿಸಿದರು.

ಇಲ್ಲಿನ ಪೊಲೀಸ್ ಠಾಣೆ ಆವರಣದಲ್ಲಿ ಭಾನುವಾರ ಕರೆದಿದ್ದ ವರ್ತಕರ ಸಭೆಯಲ್ಲಿ ಮಾತನಾಡಿದರು. ಏ.20ರ ನಂತರ ಸರ್ಕಾರ ಕೆಲ ಹೊಸ ನಿಯಮಗಳನ್ನು ಜಾರಿ ಮಾಡಲಿದ್ದು, ಪ್ರತಿಯೊಬ್ಬರು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದರು.

ವರ್ತಕರಾದ ಎಸ್.ರಾಜು ಮಾತನಾಡಿದರು. ವರ್ತಕರಾದ ಕೃಷ್ಣಪ್ಪ, ಪ್ರಕಾಶ, ನಾಗರಾಜು, ರಾಜು, ಮಂಜುನಾಥ, ತಿಪ್ಪೇಸ್ವಾಮಿ, ನಾಗಭೂಷಣ, ಸಂದೀಪ, ರಾಜಣ್ಣ, ಪ್ರಭಾಕರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net