ಮರಳು ದಂಧೆ ತಡೆಗೆ ಆಗ್ರಹ

P PURA PROTEST 19 (2)
Published on

ಪರಶುರಾಮಪುರ: ಸಮೀಪದ ಗೊರ‌್ಲತ್ತು-ಕಲಮರಹಳ್ಳಿ ಬಳಿ ನಡೆಯುತ್ತಿರುವ ಮರಳು ಸಾಗಣೆ ನಿಲ್ಲಿಸಬೇಕು ಎಂದು ಆಗ್ರಹಿಸಿ ವಿವಿಧ ಗ್ರಾಮಸ್ಥರು ಬುಧವಾರ ಮರಳು ಬ್ಲಾಕ್‌ಗಳ ಬಳಿ ಪ್ರತಿಭಟನೆ ನಡೆಸಿದರು.

ಸರ್ಕಾರದ ನಿಯಮ ಗಾಳಿಗೆ ತೂರಿ 10ರಿಂದ 15 ಅಡಿಗಳ ಆಳದವರೆಗೆ ಮರಳೆತ್ತಲಾಗುತ್ತಿದೆ. ಇಲ್ಲಿನ ಗುತ್ತಿಗೆದಾರರು ಪರ್ಮಿಟ್ ಇಲ್ಲದೆ ಅನೇಕ ಲಾರಿಗಳಲ್ಲಿ ಮರಳು ಸಾಗಿಸುತ್ತಿದ್ದಾರೆ ಎಂದು ದೂರಿದರು.

ಅಂತರ್ಜಲ ಕೊರತೆಯಿಂದ ಈ ಭಾಗದಲ್ಲಿ ಕುಡಿವ ನೀರಿಗೆ ಜನ-ಜಾನುವಾರುಗಳಿಗೆ ತತ್ವಾರ ಉಂಟಾಗಿದೆ ಎಂದು ರೈತರು ಅಳಲು ತೋಡಿಕೊಂಡರು.

ಕಳೆದೆರಡು ದಿನಗಳಿಂದ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು, ಚಳ್ಳಕೆರೆ ತಾಲೂಕು ಆಡಳಿತಕ್ಕೂ ಮನವಿ ಸಲ್ಲಿಸಲಾಗಿದೆ. ಕೂಡಲೇ ಅಧಿಕಾರಿಗಳು ಮರಳು ಸಾಗಣೆಗೆ ಕಡಿವಾಣ ಹಾಕದಿದ್ದರೆ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಮುಖಂಡರಾದ ಬೆಳಗೆರೆ ಸುರೇಶ, ದೇವರಾಜು, ಶ್ರೀನಿವಾಸ, ಜಗದೀಶ, ಎಚ್.ರಂಗನಾಥ, ಗಿರೀಶ,ರಾಜಪ್ಪ ಹಾಗೂ ಬೆಳಗೆರೆ, ನಾರಾಯಣಪುರ, ಗೊರ‌್ಲತ್ತು , ಕೋನಿಗರಹಳ್ಳಿ, ಟಿ.ಎನ್.ಕೋಟೆ ಸುತ್ತಲಿನ ಹಳ್ಳಿಗಳ ರೈತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net