ಸಿದ್ದೇಶ್ವರನದುರ್ಗದಲ್ಲಿ ಹಾಲು ಹಬ್ಬ ಆಚರಣೆ

P PURA HABBAA 13
Published on

ಪರಶುರಾಮಪುರ: ಸಿದ್ದೇಶ್ವರನದುರ್ಗದ ಗೊಲ್ಲರಹಟ್ಟಿಯಲ್ಲಿ ಈಚೆಗೆ ಕದಿರಿ ನರಸಿಂಹಸ್ವಾಮಿ, ರಂಗನಾಥಸ್ವಾಮಿ, ಚಿತ್ರಲಿಂಗೇಶ್ವರ, ಬೋರೆದೇವರು, ಬಾಲದೇವರು, ರಾಮದೇವರು, ಈರಮಲ್ಲಪ್ಪ, ಕೃಷ್ಣಸ್ವಾಮಿ ರಂಗನಾಥ ಸ್ವಾಮಿ ಸಮೂಹ ದೇವರುಗಳ ಹಾಲು ಹಬ್ಬ ನೆರವೇರಿತು.

ಗೊಲ್ಲ ಸಮುದಾಯದ ಎರಡೂ ಕಟ್ಟೆಮನೆಯವರು ದೇಗುಲದ ಎದುರು ಪ್ರತ್ಯೇಕ ಕಟ್ಟೆ ನಿರ್ಮಿಸಿ ಅದರೊಳಗೆ ಭಕ್ತರು ತಂದಿದ್ದ ಮೀಸಲು ಹಾಲನ್ನು ಹಾಕಿ ವಿಶೇಷ ಪೂಜೆ ಸಲ್ಲಿಸಲಾಯಿತು. ನೆರೆದಿದ್ದ ಭಕ್ತರಿಗೆ ಪ್ರಸಾದ ಹಾಗೂ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಜನಪದರು ಮಣೇವು ಪೂಜೆ ಜರುಗಿತು.

ಉತ್ಸವದಲ್ಲಿ ಎರಡೂ ಗುಡಿಕಟ್ಟೆಯ ಅಣ್ಣ-ತಮ್ಮಂದಿರು, ನೆಂಟರಿಷ್ಟರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net