ಯುವ ಬರಹಗಾರರಿಂದ ಕವಿತೆಗಳ ಆಹ್ವಾನ

NAGARAMGERE SRINIVAS
Published on

ಪರಶುರಾಮಪುರ: ಜನಪದ ಸಾಹಿತ್ಯ ಮತ್ತು ಗ್ರಾಮೀಣಾಭಿವೃದ್ಧಿ ಶಿಕ್ಷಣ ಸಂಸ್ಥೆ, ಚಿತ್ರದುರ್ಗದ ದರ್ಶನ್ ಎಜುಕೇಷನಲ್ ಟ್ರಸ್ಟ್ ವತಿಯಿಂದ ಚಳ್ಳಕೆರೆ ತಾಲೂಕಿನಲ್ಲಿ ಜ.5ರಂದು ಮಹಿಳೆಯರ ಹಕ್ಕು ಮತ್ತು ರಕ್ಷಣೆ ಕುರಿತು ಉಪನ್ಯಾಸ, ಕವಿಗೋಷ್ಠಿ ಏರ್ಪಡಿಸಲು ಉದ್ದೇಶಿಸಲಾಗಿದೆ.

ಈ ವಿಷಯ ಕುರಿತು ಯುವ ಬರಹಗಾರರು, ಸಾಹಿತಿಗಳು ಕವನ ಬರೆದು ಕಳುಹಿಸಬಹುದಾಗಿದೆ ಎಂದು (ಮೊ: 9980047238) ಟ್ರಸ್ಟ್ ಅಧ್ಯಕ್ಷ ನಗರಂಗೆರೆ ಶ್ರೀನಿವಾಸ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net