ಅನುಕಂಪ ಬೇಡ, ಅವಕಾಶ ಕೊಡಿ

P PURA MARIKUNTE 30 (1)
Published on

ಪರಶುರಾಮಪುರ: ಅಂಗವಿಕಲರಿಗೆ ಅನುಕಂಪ ತೋರುವ ಬದಲು ಅವಕಾಶ ಕೊಟ್ಟು ಮಾನವೀಯ ನೆಲೆಯಲ್ಲಿ ಕಾಣಬೇಕು ಎಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ತಿಳಿಸಿದರು.

ದೇವರಮರಿಕುಂಟೆಯ ಕಲಾಮಂದಿರಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಅಂಗವಿಕಲರಿಗೆ ಆಹಾರದ ಕಿಟ್ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

ಸಮಾಜದಲ್ಲಿ ಅಂಗವಿಕಲರ ಬಗೆಗಿನ ದೃಷ್ಟಿಕೋನ ಬದಲಾಗಬೇಕು. ಪರಿಸರದ ಪ್ರಭಾವ, ಅನುವಂಶೀಯತೆ, ಪಾಲಕರ ಅನಾರೋಗ್ಯದ ಕಾರಣದಿಂದ ಅಂಗವಿಕಲ ಮಕ್ಕಳು ಜನಿಸುತ್ತಾರೆ. ಆದರೆ, ಅವರಿಗೆ ಸೂಕ್ತ ಚಿಕಿತ್ಸೆ, ಪ್ರೋತ್ಸಾಹ ನೀಡಿದರೆ ಮುಖ್ಯವಾಹಿನಿಗೆ ಬರುತ್ತಾರೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಟಿ.ರವಿಕುಮಾರ ಮಾತನಾಡಿ, ಚಳ್ಳಕೆರೆ ತಾಲೂಕಿನ 3900ಕ್ಕೂ ಹೆಚ್ಚು ಅಂಗವಿಕಲರಿಗೆ ಶಾಸಕರು ವೈಯಕ್ತಿಕ ಖರ್ಚಿನಲ್ಲಿ ಆಹಾರ ಕಿಟ್‌ಗಳನ್ನು ವಿತರಿಸಿದ್ದಾರೆ ಎಂದರು.

ತಾಪಂ ಸದಸ್ಯೆ ರಂಜಿತಾ, ಸಾಹಿತಿ ತಿಪ್ಪಣ್ಣಮರಿಕುಂಟೆ, ಗ್ರಾಪಂ ಸದಸ್ಯರಾದ ಅಂಜಿನಪ್ಪ, ಮಹಾಂತೇಶ, ತಿಪ್ಪೇಸ್ವಾಮಿ, ಪಿಡಿಒ ಇರ್ಫಾನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net