ಬೆಳಗೆರೇಲಿ ಅಂಗವಿಕಲರಿಗೆ ಕಿಟ್ ವಿತರಣೆ

P PURA MLAA 13
Published on

ಪರಶುರಾಮಪುರ: ಅಂಗವಿಕಲರಿಗೆ ಅನುಕಂಪ ತೋರಿಸಿದರೆ ಸಾಲದು. ಅವರು ಸ್ವಾವಲಂಬಿಯಾಗಿ ಬದುಕಲು ಅವಕಾಶ ಕಲ್ಪಿಸುವಂತೆ ಶಾಸಕ ಟಿ.ರಘುಮೂರ್ತಿ ತಿಳಿಸಿದರು.

ಬೆಳಗೆರೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಇತ್ತೀಚೆಗೆ ಅಂಗವಿಕಲರಿಗೆ ಆಹಾರದ ಕಿಟ್ ವಿತರಿಸಿ ಮಾತನಾಡಿ ಅಂಗವಿಕಲರಿಗೆ ಸೂಕ್ತ ಸೌಲಭ್ಯ ನೀಡಿ ಪ್ರೋತ್ಸಾಹಿಸಬೇಕು ಎಂದರು.

ಜಿಪಂ ಸದಸ್ಯ ಪ್ರಕಾಶಮೂರ್ತಿ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಆಂಜನೇಯ, ಗ್ರಾಪಂ ಅಧ್ಯಕ್ಷೆ ತಿಪ್ಪಮ್ಮ, ಉಪಾಧ್ಯಕ್ಷೆ ಮಹದೇವಮ್ಮ, ನಗರಸಭೆ ಸದಸ್ಯ ರಮೇಶಗೌಡ, ಗ್ರಾಪಂ ಸದಸ್ಯರಾದ ಕೆ.ಟಿ.ನಿಜಲಿಂಗಪ್ಪ, ಗೋಪಾಲಪ್ಪ, ಮಂಜಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net