ಕೃಷಿ ಯಂತ್ರಧಾರೆ ಸೌಲಭ್ಯ ಪಡೆಯಲು ಮನವಿ

P PURA BESAAYA 16 (1)
Published on

ಪರಶುರಾಮಪುರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೃಷಿಯಂತ್ರಧಾರೆ ಸೌಲಭ್ಯದಡಿ ಬಾಡಿಗೆಗೆ ದೊರೆಯುವ ಕೃಷಿ ಯಂತ್ರಗಳ ಸದುಪಯೋಗ ರೈತರು ಪಡೆದುಕೊಳ್ಳಬೇಕು ಎಂದು ಸಂಸ್ಥೆಯ ವ್ಯವಸ್ಥಾಪಕ ಒ.ಬೋರಯ್ಯ ತಿಳಿಸಿದರು.

ದೇವರಮರಿಕುಂಟೆ ಗ್ರಾಮದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೃಷಿ ಇಲಾಖೆ ಕೃಷಿ ಯಂತ್ರಧಾರೆ ಸೌಲಭ್ಯದಡಿ ಬಾಡಿಗೆಗೆ ತಂದ ಟ್ರ್ಯಾಕ್ಟರ್ ಚಾಲಿತ ಕಲ್ಟಿವೇಟರ್ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ಕೃಷಿಯಂತ್ರಧಾರೆ ಸೌಲಭ್ಯ ಪಡೆಯಲು ಅಗತ್ಯ ದಾಖಲೆಗಳೊಂದಿಗೆ ಮುಂಗಡವಾಗಿ ಹೆಸರು ನೋಂದಣಿ ಮಾಡಿಸಬೇಕು. ಬಳಿಕ ಅಲ್ಲಿ ಲಭ್ಯವಿರುವ ಯಂತ್ರಗಳನ್ನು ಬಾಡಿಗೆಗೆ ಪಡೆದು ಬಳಸಿಕೊಳ್ಳಬಹುದು ಎಂದು ತಿಳಿಸಿದರು.

ಪ್ರಗತಿಪರ ರೈತ ದಯಾನಂದ ಮೂರ್ತಿ ಮತ್ತಿತರ ರೈತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net