ಆರ್‌ಒ ಪ್ಲಾಂಟ್ ದುರಸ್ತಿ

P PURA PARINAAMAA 21 (2)
Published on

ಪರಶುರಾಮಪುರ: ಇಲ್ಲಿನ ಜಯ್ಯಣ್ಣ ನಗರಕ್ಕೆ ಮಂಗಳವಾರ ಭೇಟಿ ನೀಡಿದ ಅಧಿಕಾರಿಗಳು ಆರ್‌ಒ ಪ್ಲಾಂಟ್ ದುರಸ್ತಿಗೊಳಿಸಿ ಸಾರ್ವಜನಿಕರಿಗೆ ಶುದ್ಧ ನೀರು ಲಭ್ಯವಾಗುವಂತೆ ಕ್ರಮ ಕೈಗೊಂಡರು.

ನೀರಿನ ಸಮಸ್ಯೆ ಕುರಿತು ಪತ್ರಿಕೆ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಗ್ರಾಮೀಣ ಕುಡಿವ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಜಯಣ್ಣನಗರ ಮುಖ್ಯ ರಸ್ತೆಯಲ್ಲಿರುವ ಆರ್‌ಒ ಪ್ಲಾಂಟ್‌ನಲ್ಲಿದ್ದ ತಾಂತ್ರಿಕ ದೋಷವನ್ನು ಪತ್ತೆ ಹಚ್ಚಿ ದುರಸ್ತಿಗೊಳಿಸಲಾಗಿದೆ ಎಂದು ಎಇಇ ಕಾವ್ಯಾ, ಎಇ ತಿಪ್ಪೇಸ್ವಾಮಿ ತಿಳಿಸಿದರು.

ಗ್ರಾಮದ ಆಸ್ಪತ್ರೆಯ ಮುಂಭಾಗ, ಚಿಕ್ಕಚೆಲ್ಲೂರು, ಪಿ.ಗೌರಿಪುರ, ದೊಡ್ಡಚೆಲ್ಲೂರು, ದೊಡ್ಡಗೊಲ್ಲರಹಟ್ಟಿ, ಪಗಡಲಬಂಡೆ ಆರ್‌ಒ ಪ್ಲಾಂಟ್ಸ್‌ಗಳಲ್ಲಿ ತಾಂತ್ರಿಕ ದೋಷ ನಿವಾರಿಸಿ ಶುದ್ಧ ಕುಡಿವ ನೀರಿನ ವ್ಯವಸ್ಥೆಗೊಳಿಸಬೇಕು ಎಂದು ಅಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ.

ಗ್ರಾಪಂ ಸದಸ್ಯ ಸಿದ್ದೇಶಣ್ಣ, ಅಜ್ಜಯ್ಯ, ತಿಪ್ಪೇಸ್ವಾಮಿ, ಭದ್ರಣ್ಣ, ರಾಘವೇಂದ್ರ, ಲಕ್ಷ್ಮೀದೇವಿ, ಕರಿಯಣ್ಣ, ನಿಂಗಜ್ಜಿ, ನಾಗರಾಜು, ರವಿ, ಮತ್ತಿತರರು ಇದ್ದರು

ಪಾಲನೆಯಾಗದ ಸೂಚನೆ: ಕರೊನಾ ಹಿನ್ನೆಲೆ ದೊಡ್ಡಚೆಲ್ಲೂರು ಸೇರಿ ಕೆಲ ಗ್ರಾಮೀಣ ಪ್ರದೇಶಗಳ ಆರ್‌ಒ ಪ್ಲಾಂಟ್ಸ್‌ಗಳಲ್ಲಿ ಕೇವಲ 2 ರೂಪಾಯಿಗೆ ಶುದ್ಧ ನೀರು ಲಭ್ಯವಾಗುವಂತೆ ಕ್ರಮ ಕೈಗೊಳ್ಳಿ ಎಂದು ಶಾಸಕ ಟಿ.ರಘುಮೂರ್ತಿ ಅವರು ಈಚೆಗೆ ನಡೆಸಿದ ಟಾಸ್ಕ್‌ಫೋರ್ಸ್ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದ್ದರು. ಆದ,ೆ ಇನ್ನು ಕೆಲ ಕಡೆಗಳಲ್ಲಿ ಈ ವ್ಯವಸ್ಥೆ ಜಾರಿಯಾಗಿಲ್ಲ ದೊಡ್ಡಚೆಲ್ಲೂರು ಗ್ರಾಪಂ ಸದಸ್ಯ ನಾಗರಾಜು ದೂರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net