ಪಿ.ಗೌರೀಪುರದಲ್ಲಿ ಇಂದು ಮಕ್ಕಳ ಹಬ್ಬ

BEO VENKATESHAPPA
Published on

ಪರಶುರಾಮಪುರ: ಸಮೀಪದ ಪಿ.ಗೌರೀಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಫೆ.25ರಂದು ಮಕ್ಕಳ ಹಬ್ಬ, ವಿಜ್ಞಾನ ಉಪಕರಣ ಹಾಗೂ ಸಂತೇಮೇಳ ಆಯೋಜಿಸಲಾಗಿದೆ ಎಂದು ಬಡ್ತಿ ಮುಖ್ಯಶಿಕ್ಷಕ ಟಿ.ಎಲ್.ಪ್ರಸನ್ನ ತಿಳಿಸಿದ್ದಾರೆ.

ಪಿ.ಮಹದೇವಪುರ ಕ್ಲಸ್ಟರ್ ವ್ಯಾಪ್ತಿಯ ಸರ್ಕಾರಿ ಕಿರಿಯ, ಹಿರಿಯ ಪ್ರಾಥಮಿಕ ಶಾಲಾ ಆಯ್ದ ಮಕ್ಕಳು ಮತ್ತು ವಿಜ್ಞಾನ ವಿಷಯದ ಶಿಕ್ಷಕರು ಈ ಮೇಳದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.

ಮೇಳವನ್ನು ಜಿಪಂ ಸದಸ್ಯ ಟಿ.ಮುತ್ತುರಾಜು, ತಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ, ಸದಸ್ಯೆ ಕವಿತಾ ಉದ್ಘಾಟಿಸಲಿದ್ದಾರೆ. ಸಾಂಸ್ಕೃತಿಕ ಚಟುವಟಿಕೆಗೆ ಬಿಇಒ ಸಿ.ಎಸ್.ವೆಂಕಟೇಶಪ್ಪ ಚಾಲನೆ ನೀಡಲಿದ್ದಾರೆ.

ಗ್ರಾಪಂ ಸದಸ್ಯರಾದ ಲಕ್ಷ್ಮೀದೇವಿ, ರಾಮಣ್ಣ, ಹೊನ್ನೂರಪ್ಪ, ಬಿಆರ್‌ಸಿ ಮಂಜಣ್ಣ, ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಕೆ.ಬಸವರಾಜು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಆರ್.ಮಾರುತೇಶ, ಬಿಆರ್‌ಪಿ ಪ್ರಸನ್ನಮಂಡೇಲಾ ಪಾಲ್ಗೊಳ್ಳಲಿದ್ದಾರೆ. ನಾಗಗೊಂಡನಹಳ್ಳಿಯ ಶಿಕ್ಷಕ ಸೌರಶಕ್ತಿ ನಾಗರಾಜು ಪವಾಡಗಳ ಗುಟ್ಟು ಬಯಲು ಕಾರ್ಯಕ್ರಮ ನಡೆಸಿಕೊಡುವರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net