ಅಲೆಮಾರಿಗಳಿಗೆ ಆಹಾರ ಸಾಮಗ್ರಿ ವಿತರಣೆ

P PURA MLAA 1
Published on

ಪರಶುರಾಮಪುರ: ಚಳ್ಳಕೆರೆ ತಾಲೂಕು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಪಿ.ಗೌರೀಪುರದ 72 ಅಲೆಮಾರಿ ಜಗ್ಗಲಿ ಸಮುದಾಯದವರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿರುವುದು ಶ್ಲಾಘನೀಯ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ಸಮೀಪದ ಪಿ.ಗೌರೀಪುರ ಗೇಟ್‌ನ ಬಳಿ ಅಲೆಮಾರಿ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿ, ಬಡಜನರ ಸಂಕಷ್ಟಕ್ಕೆ ವಿವಿಧ ಸಂಘ, ಸಂಸ್ಥೆಗಳು ಸ್ಪಂದಿಸಬೇಕು ಎಂದು ಮನವಿ ಮಾಡಿದರು.

ತಾಪಂ ಕಾರ್ಯನಿರ್ವಹಣಾಧಿಕಾರಿ ಶ್ರೀಧರ ಬಾರಿಕೇರ ಮಾತನಾಡಿ, ಲಾಕ್‌ಡೌನ್ ಹಿನ್ನೆಲೆಯಲ್ಲಿ ಹಳ್ಳಿಗಳಲ್ಲಿ ಬಡ ವರ್ಗದವರು ಕೂಲಿ ಕೆಲಸ ಸಿಗದ ಕಾರಣ ತೊಂದರೆ ಅನುಭವಿಸುತ್ತಿದ್ದಾರೆ. ಅವರಿಗೆ ಹೆಚ್ಚಿನ ನೆರವು ನೀಡಲು ನಾಗರಿಕರು ಮುಂದೆ ಬರಬೇಕು ಎಂದರು.

ಪಿಡಿಒ ಕ್ಷೇಮಾಭಿವೃದ್ಧಿ ಸಂಘದ ತಾಲೂಕಾಧ್ಯಕ್ಷ ಸಂಪತ್ ಕುಮಾರ ಮಾತನಾಡಿ, ಜಗ್ಗಲಿ ಸಮುದಾಯದ 72 ಕುಟುಂಬಗಳ ಸಂಪೂರ್ಣ ಮಾಹಿತಿ ನೀಡಿ ಮುಂದಿನ ದಿನಗಳಲ್ಲೂ ಹೆಚ್ಚಿನ ನೆರವು ನೀಡಲಾಗುವುದು ಎಂದು ತಿಳಿಸಿದರು.

ಗ್ರಾಪಂ ಅಧ್ಯಕ್ಷರಾದ ಲಲಿತಾ, ಸರೋಜಾ, ಎಂ.ಆರ್.ರುದ್ರೇಶ, ತಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ, ಸದಸ್ಯೆ ಕವಿತಾ, ಪಿಡಿಒಗಳ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಜಿ.ನಾಗರಾಜು, ಗೌರವಾಧ್ಯಕ್ಷ ಎನ್.ಆರ್.ತಿಪ್ಪೇಸ್ವಾಮಿ, ಪಿಡಿಒ ದೇವರಾಜು, ಎಪಿಎಂಸಿ ಮಾಜಿ ಸದಸ್ಯ ಎಸ್.ಚನ್ನಕೇಶವ, ಗುಜ್ಜಾರಪ್ಪ, ಗೇಟ್‌ದೇವರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net