ಪ್ಲಾಸ್ಟಿಕ್ ಭಿಕ್ಷೆ-ಭೂಮಿಯ ರಕ್ಷೆ

P PURA PLASTIIC 27 (3)
Published on

ಪರಶುರಾಮಪುರ: ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್‌ಮುಕ್ತ ಗ್ರಾಮ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿ ಪಣತೊಟ್ಟಿದ್ದು ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕೆಂದು ಟಿ.ಎನ್.ಕೋಟೆ ಗ್ರಾಪಂ ಅಧ್ಯಕ್ಷ ಓ.ಬೈಲಪ್ಪ ಮನವಿ ಮಾಡಿದರು.

ತಿಮ್ಮಣ್ಣನಾಯಕನಕೋಟೆ ಗ್ರಾಮದಲ್ಲಿ ಸ್ವಚ್ಛ ಕಾರ್ಯಕ್ರಮದಡಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್ ಭಿಕ್ಷೆ-ಭೂಮಿಯ ರಕ್ಷೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಿಪಂ, ಜಿಲ್ಲಾಡಳಿತದ ಆದೇಶದ ಮೇರೆಗೆ ಗ್ರಾಪಂ ವ್ಯಾಪ್ತಿಯ ಎಲ್ಲ ಹಳ್ಳಿಗಳಲ್ಲಿನ ಕಸ ಮತ್ತು ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಮಾಡುವ ಮೂಲಕ ಗ್ರಾಮ ನೈರ್ಮಲ್ಯಕ್ಕೆ ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು.

ತಾಪಂ ಸದಸ್ಯ ಕರಡಪ್ಪ, ಗ್ರಾಪಂ ಉಪಾಧ್ಯಕ್ಷೆ ಶಿವಮ್ಮ, ಸದಸ್ಯರಾದ ಬಸವರಾಜು, ಭಾಗ್ಯಾ, ಗೀತಾವಾಣಿ, ನಿಂಗಣ್ಣ, ನಾಗೇಂದ್ರಪ್ಪ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗ್ರಾಪಂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net