ದ್ವಿಚಕ್ರ ವಾಹನ ಸರ್ವಿಸ್ ಉಚಿತ

P PURA SEVE 29 (2)
Published on

ಪರಶುರಾಮಪುರ: ವಿವಿಧ ಇಲಾಖೆ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ದ್ವಿಚಕ್ರ ವಾಹನ ಸರ್ವೀಸ್ ಉಚಿತವಾಗಿ ನಡೆಸಲು ಮುಂದಾಗಿರುವ ದ್ವಿಚಕ್ರ ವಾಹನ ಮಾಲೀಕ ಮತ್ತು ತಂತ್ರಜ್ಞರ ಕ್ಷೇಮಾಭಿವೃಧ್ದಿ ಸಂಘದ ಕಾರ್ಯ ಮಾದರಿ ಎಂದು ಪಿಎಸ್‌ಐ ಮಹೇಶ ಹೊಸಕೋಟೆ ತಿಳಿಸಿದರು.

ಅಗತ್ಯ ವಸ್ತುಗಳ ಕೊರತೆ ಆಗದಂತೆ ಗ್ರಾಮದ ಪೊಲೀಸ್ ಠಾಣೆಯಲ್ಲಿ ಭಾನುವಾರ ಕರೆಯಲಾಗಿದ್ದ ಸಭೆಯಲ್ಲಿ ಮಾತನಾಡಿ, ಪೊಲೀಸ್, ಆರೋಗ್ಯ, ಗೃಹರಕ್ಷಕ, ಹಾಲು, ತರಕಾರಿ, ಹಣ್ಣು ಸೇರಿ ಸಾರ್ವಜನಿಕರ ಅಗತ್ಯಗಳನ್ನು ಪೂರೈಸುವವರು ದ್ವಿಚಕ್ರ ವಾಹನಗಳನ್ನು ಬಳಸುತ್ತಿದ್ದಾರೆ. ಈ ಕಾರಣಕ್ಕೆ ಸರ್ವೀಸ್ ಮಾಡಲು ಮುಂದಾಗಿರುವ ಸಂಘದ ಕಾರ್ಯ ಶ್ಲಾಘನೀಯ ಎಂದರು.

ಸಂಘದ ಅಧ್ಯಕ್ಷ ನಯಾಜ್ ಮಾತನಾಡಿ, ಸೇವೆ ಸಲ್ಲಿಸುವ ಬೈಕ್‌ಗಳು ಕೆಟ್ಟು ನಿಂತರೆ, ದೂರವಾಣಿ ಕರೆ ಮಾಡಿದರೆ ಸ್ಥಳಕ್ಕೆ ಹೋಗಿ ರಿಪೇರಿ ಮಾಡಿಕೊಡಲಾಗುವುದು. ಇದಕ್ಕಾಗಿ 8 ತಂಡ ರಚಿಸಲಾಗಿದೆ ಎಂದು ತಿಳಿಸಿದರು.

ನಯಾಜ್ ( 9844647860, 9901738656), ಮಲ್ಲೇಶ (9980982879), ದಾದಾಪೀರ್ (9449642296), ಸತೀಶ (8970100789), ಪ್ರದೀಪ ನಾಯಕ (9071662816) ಈ ನಂಬರ್‌ಗಳಿಗೆ ಸೇವಾ ಕ್ಷೇತ್ರದವರು ಕರೆ ಮಾಡಬಹುದಾಗಿದೆ ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net