ಕರೊನಾ ಸೇನಾನಿಗಳಿಗೆ ಪುಷ್ಪವೃಷ್ಟಿ

P PURA GOWRAVA 6 (1)
Published on

ಪರಶುರಾಮಪುರ: ಪರಶುರಾಮಪುರದಲ್ಲಿ ಗ್ರಾಮಸ್ಥರು ಪುಷ್ಪವೃಷ್ಟಿ ಮೂಲಕ ಕರೊನಾ ಸೇನಾನಿಗಳಿಗೆ ಗೌರವ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಶಾಸಕ ಟಿ.ರಘುಮೂರ್ತಿ, ಜಿಲ್ಲೆಯ ಆಂಧ್ರ ಗಡಿ ಗ್ರಾಮಗಳಲ್ಲಿ ಕರೊನಾ ವೈರಸ್ ಹರಡದಂತೆ ತಡೆಯುವಲ್ಲಿ ಆಶಾ, ಅಂಗನವಾಡಿ, ಪೊಲೀಸ್, ಗೃಹರಕ್ಷಕರು ಹಾಗೂ ವೈದ್ಯಕೀಯ ಸಿಬ್ಬಂದಿ ಸೇವೆ ಅನನ್ಯವಾದುದು ಎಂದು ಶ್ಲಾಘಿಸಿದರು.

ತಾಪಂ ಇಒ ಶ್ರೀಧರ ಬಾರ್‌ಕೇರ, ತಹಸೀಲ್ದಾರ್ ಎಂ.ಮಲ್ಲಿಕಾರ್ಜುನಪ್ಪ ಮಾತನಾಡಿದರು.

ಪಿಎಸ್‌ಐ ಮಹೇಶ ಹೊಸಪೇಟೆ, ವೈದ್ಯಾಧಿಕಾರಿ ಡಾ.ರಮೇಶ, ಬೆಸ್ಕಾಂ ಅಧಿಕಾರಿ ಶಿವಕುಮಾರ, ಪತ್ರಕರ್ತರು, ಆರೋಗ್ಯ, ಪೊಲೀಸ್ ಇಲಾಖೆ ನೌಕರರನ್ನು ಗೌರವಿಸಲಾಯಿತು.

ಎಸ್.ಚನ್ನಕೇಶವ, ಜಿಪಂ ಕೆಡಿಪಿ ಸದಸ್ಯ ಜಯವೀರಾಚಾರಿ, ಗ್ರಾಪಂ ಅಧ್ಯಕ್ಷ ಎಂ.ಆರ್.ರುದ್ರೇಶ, ಕೇಶವಣ್ಣ, ಅಂಜಿನಪ್ಪ, ತಿಮ್ಮಯ್ಯ, ಮಾರುತಿ, ಪ್ರಕಾಶ, ಮಧುಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net