ಚಿಲುಮೇರುದ್ರಸ್ವಾಮಿಗೆ ಗಂಗಾಪೂಜೆ

P PURA DHARMA 2
Published on

ಪರಶುರಾಮಪುರ: ಸಮೀಪದ ನಾಗಗೊಂಡನಹಳ್ಳಿ ಹೊರವಲಯದ ವೇದಾವತಿ ನದಿಯಲ್ಲಿ ಭಾನುವಾರ ಗುರು ಚಿಲುಮೇರುದ್ರಸ್ವಾಮಿಗೆ ಗಂಗಾಪೂಜೆ ನೆರವೇರಿಸಲಾಯಿತು.

ಸೂರ್ಯೋದಯದ ವೇಳೆಗೆ ಜಾಜೂರು ಗ್ರಾಮದಿಂದ ಶ್ರೀಮಠಕ್ಕೆ ಪಲ್ಲಕ್ಕಿ ಉತ್ಸವದ ಮೂಲಕ ಶ್ರೀಸ್ವಾಮಿಯನ್ನು ಕರೆತಂದು ಭಕ್ತರು, ಬಳಿಕ ವೇದಾವತಿಗೆ ತೆರಳಿ ಅಲ್ಲಿ ಗಂಗಾಪೂಜೆ ಮತ್ತಿತರ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿದರು. ಸಂಜೆ ಉತ್ಸವ ಮೂರ್ತಿಯನ್ನು ಗದ್ದುಗೆಗೆ ತಂದು ಪ್ರತಿಷ್ಠಾಪಿಸಿ ರಥಕ್ಕೆ ತೈಲಾಭೀಷೇಕ, ಗದ್ದುಗೆಗೆ ಪೂಜೆ ನೆರವೇರಿಸಲಾಯಿತು.

ಶ್ರೀಸ್ವಾಮಿ ಗದ್ದುಗೆಯನ್ನು ವಿವಿಧ ಹೂವು, ಹೊಸವಸ್ತ್ರ, ವಿಭೂತಿಯಿಂದ ಅಲಂಕರಿಸಲಾಗಿತ್ತು. ಉತ್ಸವದಲ್ಲಿ ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಶ್ರೀ ಬಸವಕಿರಣ ಸ್ವಾಮೀಜಿ ಪೂಜಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಗದ್ದುಗೆ ಮಠದ ಸಮಿತಿಯ ಉಪಾಧ್ಯಕ್ಷ ಎಚ್. ಓಬಳೇಶಪ್ಪ, ಕಾರ್ಯದರ್ಶಿ ಜೆ.ಎಚ್. ಬೊಮ್ಮಯ್ಯ, ಸಹ ಕಾರ್ಯದರ್ಶಿ ಜಿ.ಟಿ. ರವಿಕುಮಾರ, ಎಂ. ಉಮಾಮಹೇಶ್ವರಯ್ಯ, ರವಿಚಂದ್ರ, ಬಸವರಾಜು, ಪಾಲನೇತ್ರಪ್ಪ, ನರಸಿಂಹಪ್ಪ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net