

ಪರಶುರಾಮಪುರ: ಕುಡಿವ ನೀರು ಸೇರಿ ಮೂಲ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಸಮೀಪದ ಜುಂಜರಗುಂಟೆ ಗ್ರಾಮಸ್ಥರು ಬುಧವಾರ ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ಆರ್‌ಒ ಪ್ಲಾಂಟ್‌ನಲ್ಲಿ ಜನರ ಅಗತ್ಯಕ್ಕೆ ತಕ್ಕಂತೆ ಶುದ್ಧ ನೀರು ಲಭ್ಯವಾಗುತ್ತಿಲ್ಲ, ಗಂಟೆಗೊಂದು ಬಿಂದಿಗೆ ನೀರು ಬರುತ್ತಿದೆ. ಗ್ರಾಮದ ಮುಖ್ಯವೃತ್ತದಲ್ಲಿ ಹೈಮಾಸ್ಟ್ ದೀಪ ಕೆಟ್ಟು ವರ್ಷಗಳೇ ಕಳೆದಿವೆ. ಸರ್ಕಾರಿ ಶಾಲೆಯ ಪಕ್ಕದಲ್ಲೇ ಚರಂಡಿ ನಿರ್ಮಿಸಲು ತೆಗೆದ ಗುಂಡಿಗಳನ್ನು ಹಾಗೇ ಬಿಟ್ಟಿದ್ದು, ವೃದ್ಧರು ಹಾಗೂ ಮಕ್ಕಳ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಎಸ್‌ಎಸ್‌ಎನ್ ನಿರ್ವಹಣೆಯ ಆರ್‌ಒ ಪ್ಲಾಂಟ್‌ನ್ನು ಕೂಡಲೇ ಗ್ರಾಮೀಣ ನೀರು ಮತ್ತು ಸರಬರಾಜು ಇಲಾಖೆಗೆ ವರ್ಗಾಯಿಸಬೇಕು ಎಂದು ಆಗ್ರಹಿಸಿದರು.
ಗ್ರಾಮಸ್ಥರಾದ ರಂಗನಾಥ, ಪರಮೇಶ, ನರಸಿಂಹಮೂರ್ತಿ, ನಳಿನಾಕ್ಷಿ, ಯಶೋದಾ, ಶಿವಮ್ಮ, ರತ್ನಮ್ಮ, ಶ್ರೀದೇವಿ, ಪುಟ್ಟೀರಮ್ಮ, ಸರೋಜಾ, ಸಿದ್ದಮೂರ್ತಿ, ಯೋಗೇಶ, ನರಸಿಂಹಪ್ಪ, ಹನುಮಕ್ಕ ಇದ್ದರು.
ವಿಎಸ್‌ಎಸ್‌ಎನ್, ಜುಂಜರಗುಂಟೆ
ಜಯಪ್ರಕಾಶ ಅಧ್ಯಕ್ಷರು
ಆರ್‌ಒ ಪ್ಲಾಂಟ್‌ನಲ್ಲಿ ಯಂತ್ರಗಳು ದುರಸ್ತಿಗೆ ಬಂದಿವೆ. ಇದರಿಂದ ಜನಸಂಖ್ಯೆಗೆ ತಕ್ಕಂತೆ ಶುದ್ಧ ನೀರು ಲಭ್ಯವಾಗುತ್ತಿಲ್ಲ. ಗ್ರಾಪಂ, ತಾಲೂಕು ಆಡಳಿತ ಇದರ ಹೊಣೆ ಹೊತ್ತುಕೊಂಡರೆ ನಮ್ಮ ಜವಾಬ್ದಾರಿ ಬಿಟ್ಟು ಕೊಡುತ್ತೇವೆ.
ಗ್ರಾಮಕ್ಕೆ ಕುಡಿವ ನೀರು ಪೂರೈಕೆಗಾಗಿ ಕೊಳವೆಬಾವಿಗಳ ಮೋಟಾರ್ ದುರಸ್ತಿಗೊಳಿಸಲಾಗಿದೆ. ಆರ್‌ಒ ಪ್ಲಾಂಟ್‌ಗೂ ಗ್ರಾಪಂ ನೀರು ಒದಗಿಸುತ್ತಿದೆ. ಸಮರ್ಪಕ ನಿರ್ವಹಣೆಗೆ ಗ್ರಾಮೀಣ ನೀರು ಮತ್ತು ಸರಬರಾಜು ಇಲಾಖೆ ಜವಾಬ್ದಾರಿ ವಹಿಸಿಕೊಳ್ಳಬೇಕು.
ಮುತ್ತುರಾಜು
ಪಿಡಿಒ, ಗ್ರಾಪಂ ಚೌಳೂರು