ಪರಶುರಾಮಪುರಕ್ಕೆ ನಾಳೆ ಐಸಿಎಂಆರ್ ತಂಡ

P PURA AROGYA 14 (1)
Published on

ಪರಶುರಾಮಪುರ: ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ (ಐಸಿಎಂಆರ್) 30 ಜನರ ತಂಡ ಮೇ 16ರಂದು ಚಳ್ಳಕೆರೆ, ಘಟಪರ್ತಿ ಹಾಗೂ ಪರಶುರಾಮಪುರಕ್ಕೆ ಭೇಟಿ ನೀಡಲಿದೆ ಎಂದು ವೈದ್ಯಾಧಿಕಾರಿ ಡಾ.ರಮೇಶ ಹೇಳಿದರು.

ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಸಭಾ ಭವನದಲ್ಲಿ ಗುರುವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಯ ಗಡಿಭಾಗದಲ್ಲಿ ಪರಶುರಾಮಪುರವನ್ನು ಆಯ್ಕೆ ಮಾಡಿದ್ದು, ಅಂದು ಗ್ರಾಮದ ಆಯ್ದ ಕೆಲವರ ರಕ್ತದ ಮಾದರಿ ಪಡೆದುಕೊಂಡು ಪರೀಕ್ಷೆ ನಡೆಸಲಿದೆ. ಇದಕ್ಕೆ ಗ್ರಾಮಸ್ಥರು ಸಹಕರಿಸಬೇಕು ಎಂದರು.

ಪಿಎಸ್‌ಐ ಮಹೇಶ ಹೊಸಪೇಟೆ ಮಾತನಾಡಿ, ಕೇಂದ್ರದ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಕೈಗೊಂಡಿರುವ ಪೈಲಟ್ ಯೋಜನೆಗೆ ಪೊಲೀಸ್ ಇಲಾಖೆಯಿಂದ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಗ್ರಾಪಂ ಅಧ್ಯಕ್ಷ ಎಂ.ಆರ್.ರುದ್ರೇಶ ಮಾತನಾಡಿ, ಕರೊನಾ ಹರಡುವಿಕೆ ನಿಯಂತ್ರಿಸಲು ಗ್ರಾಮದ ಸ್ವಚ್ಛತೆಗೆ ಕ್ರಮ ಕೈಗೊಂಡಿದ್ದೇವೆ ಕೇಂದ್ರದ ತಂಡದ ಬರುವಿಕೆ ಹಿನ್ನೆಲೆಯಲ್ಲಿ ಜನರಿಗೆ ತಿಳಿವಳಿಕೆ ನೀಡಲಾಗಿದೆ ಎಂದರು.

ಡಾ.ವಿಶ್ವನಾಥ, ಆರೋಗ್ಯ ಇಲಾಖೆ ಸಿಬ್ಬಂದಿ ರಾಘವೇಂದ್ರ, ದಯಾನಂದ, ಮಂಜುನಾಥ, ವೀರೇಂದ್ರ, ಲೇಪಾಕ್ಷಿ, ಚನ್ನಪ್ಪ, ಅನಸೂಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net