ಕರೊನಾ ಹಿಮ್ಮೆಟ್ಟಿಸಲು ಸಹಕಾರ ಅಗತ್ಯ

P PURA ARIVUU 1
Published on

ಪರಶುರಾಮಪುರ: ಸರ್ಕಾರದ ಸಲಹೆಗಳನ್ನು ಜನ ಪಾಲಿಸಿದರೆ ಮಹಾಮಾರಿ ಕರೊನಾವನ್ನು ದೂರ ಮಾಡಬಹುದು ಎಂದು ಜಾಜೂರು ಗ್ರಾಪಂ ಅಧ್ಯಕ್ಷೆ ಭೀಮಕ್ಕ ಹೇಳಿದರು.

ಜಾಜೂರು ಗ್ರಾಪಂ, ಆರೋಗ್ಯ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆಯಿಂದ ಸಮೀಪದ ನಾಗಗೊಂಡನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬೇರೆಡೆಯಿಂದ ಬಂದ ಜನರ ಮೇಳೆ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರು ತೀವ್ರ ಜಾಗೃತಿ ವಹಿಸಬೇಕು ಎಂದು ಹೇಳಿದರು.

ಪಿಡಿಒ ಎನ್.ಆರ್.ತಿಪ್ಪೇಸ್ವಾಮಿ ಮಾತನಾಡಿದರು. ಆಶಾ ಕಾರ್ಯಕರ್ತರಾದ ಶಾರದಾ, ಚಂದ್ರಕಲಾ, ಅಂಗನವಾಡಿ ಕಾರ್ಯಕರ್ತೆಯರಾದ ಜಯಮ್ಮ, ಗಂಗಮ್ಮ, ಮುಖಂಡ ಮಹಾಂತೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net