ಬಿತ್ತನೆ ಬೀಜ ಖರೀದಿ ಅಗತ್ಯವೆನಲ್ಲ

P PURA BEEJA 6 (1)
Published on

ಪರಶುರಾಮಪುರ: ಕೃಷಿ ಇಲಾಖೆಯಿಂದಲೇ ಬಿತ್ತನೆ ಬೀಜ ಖರೀದಿಸಬೇಕೆಂದೇನೂ ಇಲ್ಲ. ಈಗಾಗಲೇ ರೈತರು ಸಂಗ್ರಹಿಸಿಕೊಂಡಿರುವ ಬೀಜವನ್ನೇ ಪಡೆದು ಬಿತ್ತನೆ ಮಾಡಿದರೆ ನಿರೀಕ್ಷಿತ ಇಳುವರಿ ಪಡೆಯಬಹುದು ಎಂದು ಕೃಷಿ ಇಲಾಖೆ ತಾಲೂಕು ಅಧಿಕಾರಿ ಎನ್.ಗಿರೀಶ ತಿಳಿಸಿದರು.

ಗ್ರಾಮದ ಬೈಪಾಸ್ ರಸ್ತೆಯ ಶ್ರೀಕೃಷ್ಣ ಭವನದಲ್ಲಿ ಕೆಒಎಫ್ ಸರಬರಾಜು ಮಾಡಿರುವ ಟಿಎಂವಿ 2 ತಳಿಯ ಶೇಂಗಾಕಾಯಿಯನ್ನು ಪರೀಕ್ಷಿಸಿ ಮಾತನಾಡಿದರು.

ರೈತರಿಗೆ ಪ್ರಸಕ್ತ ವರ್ಷಕ್ಕೆ ವಿತರಿಸಲು ಕೆಒಎಫ್ ಕಂಪನಿ ಗುಣಮಟ್ಟದ 30 ಟನ್ ಶೇಂಗಾ ಬಿತ್ತನೆ ಕಾಯಿಯನ್ನು ಈಗಾಗಲೇ ಗ್ರಾಮದ ರೈತಸಂಪರ್ಕ ಕೇಂದ್ರಕ್ಕೆ ಒಪ್ಪಿಸಿದೆ ಎಂದು ತಿಳಿಸಿದರು.

ಈ ಬಾರಿ ಬಿತ್ತನೆ ಬೀಜ ಪಡೆಯಲು ಕೃಷಿ ಇಲಾಖೆಗೆ ಬರುವ ರೈತರು ಎಫ್‌ಐಡಿ ನಂಬರ್, ಜಮೀನಿನ ಪಹಣಿ, ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ ತರಬೇಕೆಂದು ಹೇಳಿದರು.

ಎಣ್ಣೆಬೀಜ ಬೆಳೆಗಾರರ ಸಂಘದ ಅಧ್ಯಕ್ಷ ಸಿ.ಎಲ್.ಹನುಮಂತಪ್ಪ, ಕಾರ್ಯದರ್ಶಿ ಕೆ.ವಿ.ಕರಿಯಪ್ಪ, ರೈತ ಅನುವುಗಾರರಾದ ಹನುಮಂತರಾಯ, ತಿಮ್ಮಣ್ಣ, ಗ್ರಾಮಸ್ಥರಾದ ರಾಮಪ್ಪ, ರಾಜಣ್ಣ, ತಿಪ್ಪೇಸ್ವಾಮಿ, ರಾಜು, ತಿಮ್ಮಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net