29ರಿಂದ ಚನ್ನಮ್ಮನಾಗತಿಹಳ್ಳಿ ಪಾತಲಿಂಗೇಶ್ವರ ಜಾತ್ರೆ

P PURA LINGAA 18
Published on

ಪರಶುರಾಮಪುರ: ಸಮೀಪದ ಚನ್ನಮ್ಮನಾಗತಿಹಳ್ಳಿಯ ಗೊರವಿನಕೆರೆ ವಂಶಸ್ಥರ ಶ್ರೀ ಪಾತಲಿಂಗೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಫೆ.29ರಿಂದ ಆರಂಭಗೊಳ್ಳಲಿದೆ ಎಂದು ನಿವೃತ್ತ ಬೆಸ್ಕಾಂ ಅಧಿಕಾರಿ ಪಿ ರುದ್ರಮೂರ್ತಿ, ಗ್ರಾಮದ ಮುಖಂಡ ಪಾತಲಿಂಗಪ್ಪ ತಿಳಿಸಿದ್ದಾರೆ.

ದೇವಸ್ಥಾನದ ಆಡಳಿತ ಮಂಡಳಿ ನಿರ್ಧಾರದಂತೆ ಫೆ.29ರ ಮಧ್ಯಾಹ್ನ 3ಕ್ಕೆ ಬೆಳ್ಳಿ ರಥದಲ್ಲಿ ಶ್ರೀಸ್ವಾಮಿಯನ್ನು ಕರೆತರಲಾಗುತ್ತದೆ. ಮಾ.1ರ ಬೆಳಗ್ಗೆ 5ಕ್ಕೆ ಶ್ರೀಸ್ವಾಮಿಗೆ ರುದ್ರಾಭಿಷೇಕ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ ಎಂದರು.

ಸಂಸದ ಎ. ನಾರಾಯಣಸ್ವಾಮಿ, ಶಾಸಕ ಟಿ. ರಘುಮೂರ್ತಿ, ಪರಶುರಾಮಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಿರಣ್‌ಶಂಕರ್ ಪಾಲ್ಗೊಳ್ಳುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net