ಶಾಲೆ ಆರಂಭ ಚಿಂತನಾ ಸಭೆ

P PURA SAMITHI 11
Published on

ಪರಶುರಾಮಪುರ: ಶಾಲೆ ಆರಂಭಿಸುವ ಕುರಿತು ಪಾಲಕರ ಅಭಿಪ್ರಾಯ ಸಂಗ್ರಹಿಸುವ ಕಾರ್ಯ ಮಾಡಲಾಗುತ್ತಿದೆ ಬಡ್ತಿ ಮುಖ್ಯಶಿಕ್ಷಕ ಟಿ.ಎಲ್.ಪ್ರಸನ್ನ ಹೇಳಿದರು.

ಸಮೀಪದ ಪಿ.ಗೌರೀಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶಿಕ್ಷಣ ಇಲಾಖೆ, ಶಾಲಾ ಸಮಿತಿಯಿಂದ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.

ಸರ್ಕಾರದ ನಿರ್ದೇಶನದಂತೆ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಪದಾಧಿಕಾರಿಗಳ ಸಭೆ ಕರೆದು ಶಾಲೆ ಆರಂಭಿಸಲು ಅಭಿಪ್ರಾಯ ಸಂಗ್ರಹಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.

ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಮಂಗಳಗೌರಿ ಮಾತನಾಡಿ, ಮಕ್ಕಳ ಹಿತದೃಷ್ಟಿಯಿಂದ ಆಗಸ್ಟ್ ನಂತರವೇ ಶಾಲೆ ಆರಂಭಿಸಬೇಕು ಎಂದು ತಿಳಿಸಿದರು.

ಶಿಕ್ಷಕರಾದ ದಾಕ್ಷಾಯಣಮ್ಮ, ಚಂದ್ರಕಲಾ, ಲೋಕೇಶ, ಸತೀಶ, ಸಮಿತಿಯ ರಾಮಚಂದ್ರಪ್ಪ, ಯಶೋಧರಪ್ಪ, ತಿಮ್ಮಯ್ಯ, ಕೆಂಚಮ್ಮ, ಪುಟ್ಟಮ್ಮ, ಬಾಲಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net