

ಪರಶುರಾಮಪುರ: ಸಮೀಪದ ಕಡೇಹುಡೆ ಗ್ರಾಮದಲ್ಲಿ ಎರಡು ದಿನ ಅಚ್ಚವಳ್ಳಿ ಮಾರಮ್ಮದೇವಿ ಉತ್ಸವ ನೆರವೇರಿತು.
ಭಾನುವಾರ ನೂರೊಂದು ಎಡೆ, ಬಿಲ್ವಗೂಡು ಭೂತಸೇವೆ ನೆರವೇರಿದವು. ಸೋಮವಾರ ಗೋಸಿಕೆರೆ ಹೊಳೆಯಲ್ಲಿ ಗಂಗಾಪೂಜೆ ನೆರವೇರಿಸಲಾಯಿತು.
ನಂತರ ಕಡೇಹುಡೆಗೆ ಕರೆತಂದು ಪೂಜೆ ಸಲ್ಲಿಸಲಾಯಿತು. ಮಂಗಳವಾರ ಮಹಿಳೆಯರು ಮಕ್ಕಳು ಹಿಟ್ಟಿನಾರತಿ ಸೇವೆ ಸಲ್ಲಿಸಿದರು. ಕರ್ನಾಟಕ-ಆಂಧ್ರದ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ಹರಕೆ ಸಲ್ಲಿಸಿದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.