

ಪರಶುರಾಮಪುರ: ಸಮೀಪದ ಬೊಮ್ಮನಕುಂಟೆ ಗ್ರಾಮದಲ್ಲಿ ಮಾ.6ರಿಂದ 8ರ ವರೆಗೆ ಸಮೂಹ ದೇವರುಗಳ ಜಾತ್ರಾ ಮಹೋತ್ಸವ ಆಯೋಜಿಸಲಾಘಿದೆ. 6ರಂದು ಮುಗುದಾಳ ಬೆಟ್ಟದ ಕರಿಯಮ್ಮದೇವಿ, ಪಾಲನಾಯಕ ಸ್ವಾಮಿ, ಜಾಜೂರು ಕರಿಯಮ್ಮದೇವಿ, ತಿಪ್ಪನಹಳ್ಳಿಯ ಪಾಲನಾಯಕಸ್ವಾಮಿ, ಲಕ್ಷ್ಮೀ ಓಬಳನರಸಿಂಹಸ್ವಾಮಿ ದೇವರುಗಳ ಮೂರ್ತಿಗಳ ಆಗಮನವಾಗುವುದು.
7ರಂದು ವೇದಾವತಿ ನದಿಯಲ್ಲಿ ಗಂಗಾಪೂಜೆ, ಮಣೇವು ಪೂಜಾ ಮಹೋತ್ಸವ, ಸಂಜೆ ಹೂವಿನ ಪಲ್ಲಕ್ಕಿ ಉತ್ಸವ. 8ರ ಭಾನುವಾರ ಬೆಳಗ್ಗೆ ಮೇಲುದೀಪಾರಾಧನೆ ಉತ್ಸವ, ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.