ಲಕ್ಷ್ಮೀ ನರಸಿಂಹಸ್ವಾಮಿ ಬ್ರಹ್ಮರಥೋತ್ಸವ

P PURA BRAHMAARATHAA 9..
Published on

ಪರಶುರಾಮಪುರ: ಸಮೀಪದ ಟಿಎನ್‌ಕೋಟೆ ಓಬಳಾಪುರ ಗ್ರಾಮದಲ್ಲಿ ಭಾನುವಾರ ಸಂಜೆ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಬ್ರಹ್ಮರಥೋತ್ಸವ ನೆರವೇರಿತು.

ಉತ್ಸವದ ಅಂಗವಾಗಿ ದೇವರಿಗೆ ಪಂಚಾಮೃತಾಭಿಷೇಕ, ಹೋಮ, ಪೂರ್ಣಾಹುತಿ, ಮಹಾ ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆದವು. ಸಂಜೆ ಈಶ್ವರ ದೇಗುಲದ ಬಳಿ ಲಕ್ಷ್ಮೀನರಸಿಂಹಸ್ವಾಮಿ ಉತ್ಸವ ನಡೆಯಿತು. ಗ್ರಾಮಸ್ಥರೂ ಸೇರಿ ವಿವಿಧ ಹಳ್ಳಿಗಳ ಭಕ್ತರು ಎತ್ತಿನ ಗಾಡಿ, ಲಘುವಾಹನಗಳಲ್ಲಿ ಆಗಮಿಸಿ ದೇವಸ್ಥಾನ ಪ್ರದಕ್ಷಿಣೆ ಹಾಕಿದರು. ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net