ಸಿದ್ದೇಶ್ವರನದುರ್ಗದಲ್ಲಿ ಕರಡಿ ಪ್ರತ್ಯಕ್ಷ

P PURA KARADII 29
Published on

ಪರಶುರಾಮಪುರ: ಸಮೀಪದ ಸಿದ್ದೇಶ್ವರನದುರ್ಗ ಬೆಟ್ಟದಲ್ಲಿ ಶನಿವಾರ ನಸುಕಿನಲ್ಲಿ ಕರಡಿ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ.

ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕಾಗಮಿಸಿ ಸ್ಥಳೀಯರ ನೆರವಿನಿಂದ ಬೆಟ್ಟದ ಗುಹೆಯ ಬಳಿ ಬಲೆ ಅಳವಡಿಸಿ ಕರಡಿ ಹಿಡಿಯಲು ಯತ್ನಿಸಿದರು. ಆದರೆ, ಕರಡಿ ಪುಟ್ಲೋರಹಳ್ಳಿಯ ಕಾವಲು ಕಡೆಗೆ ಸಾಗಿತು. ವಲಯ ಅರಣ್ಯಾಧಿಕಾರಿ ಸುರೇಶ್, ಉಪ ವಲಯ ಅರಣ್ಯಾಧಿಕಾರಿ ಎಸ್.ಬಾಬು, ಅರಣ್ಯ ರಕ್ಷಕರಾದ ಪ್ರಮೋದ್, ಗಂಗಾಧರ, ಈರಣ್ಣ, ಚಿಕ್ಕಣ್ಣ, ಜಯಣ್ಣ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net