ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ಅಗತ್ಯ

P PURA SHASAKAA 24 (2)
Published on

ಪರಶುರಾಮಪುರ: ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ಅಗತ್ಯ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.

ಕಾಲೇಜು ಶಿಕ್ಷಣ ಇಲಾಖೆಯಿಂದ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ಪದವಿಯ 60 ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಲ್ಯಾಪ್‌ಟಾಪ್ ಉಚಿತವಾಗಿ ವಿತರಿಸಿ ಮಾತನಾಡಿದರು.

ಗ್ರಾಮೀಣ ವಿದ್ಯಾರ್ಥಿಗಳು ಪ್ರತಿಭಾವಂತರು. ಇವರಿಗೆ ಅಗತ್ಯ ಸೌಕರ್ಯ ಒದಗಿಸಿಕೊಟ್ಟರೆ ಸಾಧನೆ ಶಿಖರ ಏರುವುದರಲ್ಲಿ ಯಾವುದೇ ಅನುಮಾನ ಇಲ್ಲ. ಕಾಲೇಜಿನ ಡಿಜಿಟಲ್ ಶಿಕ್ಷಣಕ್ಕೆ ಅಗತ್ಯವಿರುವ ಎಲ್‌ಸಿಡಿ ಮತ್ತು ಕಂಪ್ಯೂಟರ್ ಪೂರೈಕೆಗಾಗಿ ಸರ್ಕಾರಕ್ಕೆ 3 ಲಕ್ಷ ರೂ. ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಪ್ರಾಚಾರ್ಯ ಡಾ.ಕೆ.ಟಿ.ಮಹಾಂತೇಶ ಮಾತನಾಡಿ, ಆಂಧ್ರ ಗಡಿಯ ಸರ್ಕಾರಿ ಪದವಿ ಕಾಲೇಜಿಗೆ ಹೋಬಳಿಯ ವಿವಿಧೆಡೆಯ ವಿದ್ಯಾರ್ಥಿಗಳ ಅನುಕೂಲಕ್ಕೆ ಸರ್ಕಾರಿ ಬಸ್, ಬಿಸಿಎಂ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಬೇಕು. ಒಳಾಂಗಣ ಕ್ರೀಡಾಂಗಣ, ಗ್ರಂಥಾಲಯ ಕೊಠಡಿ ಮಂಜೂರು ಮಾಡಲು ಶಾಸಕರು ಮುಂದಾಗಬೇಕು ಎಂದರು.

ಕಾಲೇಜು ಶಿಕ್ಷಣ ಇಲಾಖೆ ಹೆಚ್ಚುವರಿ ನಿರ್ದೇಶಕ ಪ್ರೊ.ಪ್ರಸಾದ್ ಮಾತನಾಡಿ, ವಿದ್ಯಾರ್ಥಿಗಳು ವ್ಯಾಸಂಗದ ಅವಧಿಯಲ್ಲಿ ಸಮಸ್ಯೆಗಳಾದರೆ ಮೈತ್ರಿ ಸಹಾಯವಾಣಿಗೆ ಕರೆ ಮಾಡಿ ಪರಿಹರಿಸಿಕೊಳ್ಳಬೇಕು. ಪಾಲಕರು ಆಗಾಗ ಕಾಲೇಜಿಗೆ ಭೇಟಿ ನೀಡಿ ಅಧ್ಯಾಪಕರಿಂದ ವಿದ್ಯಾರ್ಥಿಗಳ ಕಲಿಕಾ ಪ್ರಗತಿ ಅವಲೋಕಿಸುವ ಕೆಲಸವಾಗಬೇಕು ಎಂದರು.

ತಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ, ಮಾಜಿ ಅಧ್ಯಕ್ಷ ಜಿ.ವೀರೇಶ, ನಗರಸಭೆ ಮಾಜಿ ಸದಸ್ಯ ಪ್ರಸನ್ನಕುಮಾರ, ಎಪಿಎಂಸಿ ಮಾಜಿ ಸದಸ್ಯರಾದ ಎಸ್.ಚನ್ನಕೇಶವ, ಟಿ.ಆರ್. ಹನುಮಂತರಾಯ, ಗ್ರಾಪಂ ಅಧ್ಯಕ್ಷ ಎಂ.ಆರ್.ರುದ್ರೇಶ, ಉಪಾಧ್ಯಕ್ಷೆ ಎನ್.ದೀಪಾ, ಸದಸ್ಯರಾದ ಬಿ.ತಿಪ್ಪೇಸ್ವಾಮಿ, ಬೊಮ್ಮಕ್ಕ, ಕೃಷ್ಣಪ್ಪ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net