ಎಲೆ ಬಳ್ಳಿ ತೋಟಕ್ಕೆ ಹಾನಿ

PRPURA BELEHAANI 14
Published on

ಪರಶುಪಾಮಪುರ: ಸಮೀಪದ ಟಿ.ಎನ್.ಕೋಟೆ ಗ್ರಾಮದ ಎಸ್.ಬಸವರಾಜು, ಎಸ್. ಮೂರ್ತಪ್ಪ, ಪಾಲಣ್ಣ ಹಾಗೂ ಭಜನೆ ಓಬಜ್ಜ ಎಂಬುವರ ತಲಾ ಒಂದೊಂದು ಎಕರೆ ಎಲೆಬಳ್ಳಿ ತೋಟ ಮತ್ತು ಅಡಕೆ ಗಿಡಗಳು ಈಚೆಗೆ ಸುರಿದ ಬಿರುಗಾಳಿ ಸಹಿತ ಮಳೆಗೆ ನೆಲಕಚ್ಚಿದೆ.

10 ಲಕ್ಷಕ್ಕೂ ಅಧಿಕ ನಷ್ಟ ಉಂಟಾದ್ದರಿಂದ ಮಂಗಳವಾರ ಶಾಸಕ ಟಿ.ರಘುಮೂರ್ತಿ ನೇರ ರೈತರ ಜಮೀನುಗಳಿಗೆ ತೆರಳಿ ಬೆಳೆನಷ್ಟ ಪರೀಕ್ಷಿಸಿದರು. ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವಿರೂಪಾಕ್ಷಪ್ಪ, ಎಪಿಎಂಸಿ ಮಾಜಿ ಸದಸ್ಯ ಎಸ್. ಚನ್ನಕೇಶವ, ಗ್ರಾಪಂ ಅಧ್ಯಕ್ಷ ಓ. ಬೈಲಪ್ಪ, ತಾಪಂ ಸದಸ್ಯ ಕರಡಪ್ಪ, ತಾಲೂಕು ಮಟ್ಟದ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net