29ರಿಂದ ಪಾತಲಿಂಗೇಶ್ವರ ಜಾತ್ರೆ

P PURA LINGAA 18
Published on

ಪರಶುರಾಮಪುರ: ಸಮೀಪದ ಚನ್ನಮ್ಮನಾಗತಿಹಳ್ಳಿಯ ಗೊರವಿನಕೆರೆ ವಂಶಸ್ಥರ ಶ್ರೀ ಪಾತಲಿಂಗೇಶ್ವರಸ್ವಾಮಿ ಜಾತ್ರೆ ಫೆ.29ರಿಂದ ಆರಂಭಗೊಳ್ಳಲಿದೆ.

ಫೆ.29ರ ಮಧ್ಯಾಹ್ನ 3ಕ್ಕೆ ಬೆಳ್ಳಿ ರಥದಲ್ಲಿ ಶ್ರೀಸ್ವಾಮಿಯನ್ನು ಕರೆತರಲಾಗುತ್ತದೆ. ಮಾ.1ರ ಬೆಳಗ್ಗೆ 5ಕ್ಕೆ ಶ್ರೀಸ್ವಾಮಿಗೆ ರುದ್ರಾಭಿಷೇಕ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ.

ಸಂಸದ ಎ. ನಾರಾಯಣಸ್ವಾಮಿ, ಶಾಸಕ ಟಿ.ರಘುಮೂರ್ತಿ, ಪರಶುರಾಮಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಿರಣ್ ಶಂಕರ್ ಪಾಲ್ಗೊಳ್ಳುವರು.

ಜಾತ್ರೆ ವೇಳೆ ಮುಖಂಡರಾದ ಕೆ.ಶಿವಮೂರ್ತಿ, ಕೆ.ಲಿಂಗಣ್ಣ, ಎವಿ ನಿರಂಜನಮೂರ್ತಿ, ಕೆ.ಟಿ. ರಾಜಶೇಖರ್, ಎ.ವಿ. ಸೋಮಸುಂದರ ಅವರನ್ನು ಗೌರವಿಸಲಾಗುತ್ತದೆ ಎಂದು ಜಾತ್ರಾ ಉತ್ಸವ ಸಮಿತಿ ಸದಸ್ಯ ಕರೀಕೆರೆ ನಾಗರಾಜು ಹಾಗೂ ನಿವೃತ್ತ ಬೆಸ್ಕಾಂ ಅಧಿಕಾರಿ ಪಿ ರುದ್ರಮೂರ್ತಿ,ಮುಖಂಡ ಪಾತಲಿಂಗಪ್ಪ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net