

ಪರಶುರಾಮಪುರ: ಹೋಬಳಿ ವ್ಯಾಪ್ತಿಯ ಜಾಜೂರು ಗ್ರಾಮವನ್ನು ಕೆಂಪು ವಲಯ ಎಂದು ಜಿಲ್ಲಾಡಳಿತ ಘೋಷಿಸಿದ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಗ್ರಾಮದಲ್ಲಿ ಶುಕ್ರವಾರ ತುರ್ತು ಸಭೆ ನಡೆಸಿ ಜಾಗೃತಿ ಸಭೆ ನಡೆಸಿದರು.
ಟಿಎಚ್‌ಒ ಡಾ ಪ್ರೇಮಸುಧಾ ನೇತೃತ್ವದ ತಂಡ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತು.
ಚಳ್ಳಕೆರೆ ಪೊಲೀಸ್ ಉಪಾಧೀಕ್ಷಕ ರೋಷನ್ ಜಮೀರ್ ಮಾತನಾಡಿ, ಈ ಭಾಗದ ಮಾರ‌್ನಾಲ್ಕು ಕಿಮೀ ವ್ಯಾಪ್ತಿಯಲ್ಲಿ ಸೀಲ್‌ಡೌನ್ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಇದನ್ನು ಉಲ್ಲಂಘಿಸಿದರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ತಹಸೀಲ್ದಾರ್ ಮಲ್ಲಿಕಾರ್ಜುನಪ್ಪ, ಸಿಪಿಐ ಇ.ಆನಂದಪ್ಪ, ಪಿಎಸ್‌ಐ ಮಹೇಶ, ಪಿಡಿಒ ಎನ್.ಆರ್.ತಿಪ್ಪೇಸ್ವಾಮಿ, ಆರ್‌ಐ ಹಿರಿಯಪ್ಪ, ಡಾ.ಶ್ರೀನಿವಾಸ ಇದ್ದರು.