ವಿದ್ಯಾರ್ಥಿಗಳ ಮನೆಗೆ ಧಾನ್ಯ ವಿತರಣೆ

P PURA SHAALE 8 (3)
Published on

ಪರಶುರಾಮಪುರ: ಹೋಬಳಿಯ ಜಾಜೂರು ಪ್ರಾಥಮಿಕ ಹಾಗೂ ಪ್ರೌಢಶಾಲೆ ಮಕ್ಕಳಿರುವ ಮನೆಗಳಿಗೆ ಬುಧವಾರ ಶಿಕ್ಷಕರು ಭೇಟಿ ನೀಡಿ ಕರೊನಾ ರಜಾವಧಿಯ ಆಹಾರ ಧಾನ್ಯ ವಿತರಿಸಿದರು.

1-5ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ 2 ಕೆಜಿ ನೂರು ಗ್ರಾಂ ಅಕ್ಕಿ, 1 ಕೆಜಿ 50 ಗ್ರಾಂ ಬೇಳೆ, 6-7ನೇ ತರಗತಿಯವರಿಗೆ ತಲಾ 3 ಕೆಜಿ 150 ಗ್ರಾಂ ಅಕ್ಕಿ, 1 ಕೆಜಿ 150 ಗ್ರಾಂ ತೊಗರಿ ಬೇಳೆ ಪ್ಯಾಕೆಟ್ ನೀಡಲಾಯಿತು.

ಮುಖ್ಯಶಿಕ್ಷಕ ಆರ್.ಚಿಕ್ಕಪ್ಪಯ್ಯ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ನರಸಿಂಹಪ್ಪ, ಶಿಕ್ಷಕರಾದ ಈರಣ್ಣ, ಕರಿಯಪ್ಪ, ಬಸವರಾಜು, ಪಾಲಕರಾದ ರಾಜು, ಚಲುಮಪ್ಪ, ಕರಿಯಣ್ಣ, ಲಕ್ಷ್ಮಿದೇವಿ, ಚಲುಮಕ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net