ದಾರ್ಶನಿಕರ ಆದರ್ಶ ಸಾರ್ವತ್ರಿಕ ಸತ್ಯ

P PURA HABBBAA 30 (1)
Published on

ಪರಶುರಾಮಪುರ: ಭಾರತೀಯ ಪರಂಪರೆಯಲ್ಲಿ ದಾರ್ಶನಿಕರ ಆದರ್ಶಗಳು ಇಂದಿಗೂ ಪ್ರಸ್ತುತ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಆರ್.ರುದ್ರೇಶ ಹೇಳಿದರು.

ಗ್ರಾಪಂ ಕಚೇರಿಯಲ್ಲಿ ಗುರುವಾರ ಸ್ಥಳೀಯ ಆಡಳಿತ, ಉಪ್ಪಾರ ಸಮುದಾಯ ಆಯೋಜಿಸಿದ್ದ ಭಗೀರಥ ಮಹರ್ಷಿ ಜಯಂತ್ಯುತ್ಸವದಲ್ಲಿ ಮಾತನಾಡಿದರು.

ಚಳ್ಳಕೆರೆ ನಗರ ಹಾಗೂ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಶಾಸಕ ಟಿ.ರಘುಮೂರ್ತಿ ಅವರು ಶೋಷಿತ-ದಲಿತ ಸಮುದಾಯದವರಿಗೆ ಸಮುದಾಯಭವನ ನಿರ್ಮಿಸಿಕೊಟ್ಟು ಧಾರ್ಮಿಕ-ಸಾಮಾಜಿಕ ಚಟುವಟಿಕೆಗಳಿಗೆ ಅನುವು ಮಾಡಿಕೊಟ್ಟಿದ್ದಾರೆ ಎಂದರು.

ಉಪ್ಪಾರ ಸಮುದಾಯದ ಮುಖಂಡ ಗ್ರಾಪಂ ಸದಸ್ಯ ಟಿ.ಗೋವಿಂದಪ್ಪ, ಭಗೀರಥ ಮಹರ್ಷಿ ಕುರಿತು ಮಾರುತಿ ಮಾತನಾಡಿದರು.
ಪಿಡಿಒ ಜಿ.ನಾಗರಾಜು, ಗ್ರಾಪಂ ಸದಸ್ಯ ಪ್ರಸನ್ನಕುಮಾರ, ಮಾಜಿ ಅಧ್ಯಕ್ಷ ಮಾರುತಿ, ಗ್ರಾಮಸ್ಥರಾದ ರಮೇಶ, ತಿಮ್ಮಯ್ಯ, ಹೂವಿನಕುಮಾರ, ಲಕ್ಷ್ಮಣಪ್ಪ, ಕರಿಯಣ್ಣ, ಹನುಮಂತಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net