ಜಾಜೂರು ಗ್ರಾಮ ಸೀಲ್‌ಡೌನ್

P PURA ASHAA 18
Published on

ಪರಶುರಾಮಪುರ: ಜಾಜೂರು ಗ್ರಾಮವನ್ನು ಸೀಲ್‌ಡೌನ್ ಆಗಿರುವ ಹಿನ್ನೆಲೆಯಲ್ಲಿ ಇಲ್ಲಿನ ಪಿಎಚ್‌ಸಿಯನ್ನು ತಾತ್ಕಾಲಿಕವಾಗಿ ಮುಚ್ಚಿಸಲಾಗಿದ್ದು, 108 ಅಂಬ್ಯುಲೆನ್ಸ್ ಹಾಗೂ ದಿನದ 24 ಗಂಟೆಯೂ ವೈದ್ಯಕೀಯ ಸೇವೆ ಲಭ್ಯವಾಗುವ ವ್ಯವಸ್ಥೆ ಮಾಡಲಾಗಿದೆ ಎಂದು ಟಿಎಚ್‌ಒ ಡಾ.ಪ್ರೇಮಸುಧಾ ತಿಳಿಸಿದ್ದಾರೆ.

ಜಾಜೂರು ಸೇರಿ ಸುತ್ತಲಿನ ಹಳ್ಳಿಗಳಲ್ಲಿ ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತರಿಂದ ಪ್ರತಿ ಮನೆಯ ಸದಸ್ಯರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಜಾಜೂರಿನ ಐದುನೂರು ಮನೆಗಳಿಗೂ ಭೇಟಿ ನೀಡಿ ಸಮೀಕ್ಷೆ ನಡೆಸಿದ್ದು, ಹೊರ ಜಿಲ್ಲೆಯಿಂದ ಬಂದವರ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದರು.

ಗುರುವಾರ ರಾತ್ರಿಯಿಂದ ಚಳ್ಳಕೆರೆಯಲ್ಲಿ ಹೋಮ್‌ಕ್ವಾರಂಟೈನ್‌ನಲ್ಲಿರುವ ಗ್ರಾಮದ ಒಂದೇ ಕುಟುಂಬ ಆರು ಸದಸ್ಯರ ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಲಾಗಿದ್ದು, ಸೋಮವಾರದೊಳಗೆ ವರದಿ ಕೈಸೇರಲಿದೆ. ಅಲ್ಲಿಯವರೆಗೆ ಜಾಜೂರು ಹಾಗೂ ಸುತ್ತಲಿನ 5 ಕಿಮೀ ವ್ಯಾಪ್ತಿಯಲ್ಲಿ ಸೀಲ್‌ಡೌನ್ ಜಾರಿಯಲ್ಲಿ ಇರಲಿದೆ. ಯಾರು ಒಳ ಬರಲು ಮತ್ತು ಹೊರ ಹೋಗಲು ಅವಕಾಶ ಇರುವುದಿಲ್ಲ. ಅಗತ್ಯ ಸೇವೆಯನ್ನು ಮನೆ ಬಾಗಿಲಿಗೆ ಒದಗಿಸಲಾಗುತ್ತದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net