ವಿವಿ ಸಾಗರದ ನೀರಿಗೆ ಕನ್ನ ಆರೋಪ

P PURA NEERU 21
Published on

ಪರಶುರಾಮಪುರ: ಶಿಡ್ಲಯ್ಯನಕೋಟೆ ಫೀಡರ್ ಚಾನಲ್ ಮೂಲಕ ಬರುವ ವಿವಿ ಸಾಗರ ನೀರನ್ನು ಬುಡ್ರುಕುಂಟೆ ಬಳಿ ಕೆಲವರು ಮೋಟರ್‌ನಿಂದ ಮೇಲೆತ್ತುತ್ತಿದ್ದು ತಡೆಯುವಂತೆ ಟಿ.ಎನ್.ಕೋಟೆಯ ವಿನಾಯಕ ಗೆಳೆಯರ ಬಳಗದ ಅಧ್ಯಕ್ಷ ತಿಪ್ಪೇಸ್ವಾಮಿ ಹಾಗೂ ಪರಶುರಾಮಪುರದ ರೈತ ತಿಪ್ಪೇಸ್ವಾಮಿ ಇತರರು ಆಗ್ರಹಿಸಿದ್ದಾರೆ.

ಶಿಡ್ಲಯ್ಯಕೋಟೆ ಬ್ಯಾರೇಜ್‌ನ ಎಡ-ಬಲ ನಾಲೆಗಳ ಮೂಲಕ ಸೂಗೂರು, ಬುಡ್ರುಕುಂಟೆ, ರಾಣಿಕೆರೆ, ಗೋಸಿಕೆರೆ, ಟಿ.ಎನ್.ಕೋಟೆ, ಪರಶುರಾಮಪುರ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಹಿರಿಯೂರು ತಾಲೂಕಿನ ಬುಡ್ರುಕುಂಟೆ ಬಳಿ ಕೆಲವರು ಮೋಟರ್ ಬಳಸಿ ನೀರು ಮೇಲೆತ್ತುತ್ತಿರುವ ಕಾಣ ಮುಂದಿನ ಗ್ರಾಮಗಳ ಕೆರೆಗಳಿಗೆ ನೀರು ಹರಿದುಬರುತ್ತಿಲ್ಲ.

ನೀರಾವರಿ ಇಲಾಖೆ ಅಧಿಕಾರಿಗಳು ಕಡಿವಾಣ ಹಾಕದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭ ಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ನೀರು ಮೇಲೆತ್ತಲು ಕಡಿವಾಣ ಹಾಕುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಅವೈಜ್ಞಾನಿಕ ನೀರು ಬಳಕೆಗೆ ತಡೆಯೊಡ್ಡುವ ಮೂಲಕ ಉಳಿದ ಕೆರೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳುತ್ತೇನೆ.
> ಟಿ.ರಘುಮೂರ್ತಿ ಶಾಸಕರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net