ಆಧಾರ್ ಕೇಂದ್ರದ ಸದ್ಬಳಕೆಗೆ ಮನವಿ

P PURA ADHARR 20 (3)
Published on

ಪರಶುರಾಮಪುರ: ನಾಡಕಚೇರಿಯ ಜನಸ್ನೇಹಿ ಕೇಂದ್ರದಲ್ಲಿ ಆಧಾರ್ ತಿದ್ದುಪಡಿ ಕೇಂದ್ರ ತೆರೆದಿದ್ದು, ಸಾರ್ವಜನಿಕರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಉಪ ತಹಿಸೀಲ್ದಾರ್ ಕೆ.ಬಿ.ವಸಂತಕುಮಾರ್ ತಿಳಿಸಿದರು.

ಗ್ರಾಮದ ನಾಡಕಚೇರಿಯಲ್ಲಿ ಶುಕ್ರವಾರ ಆಧಾರ್ ತಿದ್ದುಪಡಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಪ್ರದೇಶಗಳ ಜನರು ಆಧಾರ್ ಕಾರ್ಡ್ ತಿದ್ದುಪಡಿಗಾಗಿ ಅಲೆದಾಡುತ್ತಿದ್ದು, ಅವರಿಗೆ ಅನುಕೂಲವಾಗಲೆಂದು ಈ ಕ್ರಮಕೈಗೊಳ್ಳಲಾಗಿದೆ ಎಂದರು.

ಆರ್‌ಐ ಮೋಹನ್‌ಕುಮಾರ್, ಸಿಬ್ಬಂದಿ ಹನುಮಂತರಾಯ, ಅಶೋಕ, ಅರುಣ್‌ಕುಮಾರ್, ಎಸ್‌ಡಿಎ ಜಯಲಕ್ಷಿ ್ಮ, ಗ್ರಾಮಸ್ಥರಾದ ಬಸವರಾಜ, ನಾಗಲಾಂಬಾ, ನೀಲಕಂಠಪ್ಪ, ಅಮೃತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net