

ಪರಶುರಾಮಪುರ: ಮಹಿಳಾ ದಿನಾಚರಣೆ ಅಂಗವಾಗಿ ಟಿ.ಎನ್.ಕೋಟೆಯಲ್ಲಿ ಶನಿವಾರ ಮಹಿಳಾ ವಿಶೇಷ ಗ್ರಾಮಸಭೆ ಜರುಗಿತು.
ಗ್ರಾಪಂ ಅಧ್ಯಕ್ಷ ಓ.ಬೈಲಪ್ಪ ಮಾತನಾಡಿ, ಆಳುವ ಸರ್ಕಾರಗಳು ಮಕ್ಕಳ, ಮಹಿಳಾ ದಿನಾಚರಣೆಯ ವೇಳೆ ಗ್ರಾಪಂ ಗ್ರಾಮಸಭೆಗಳನ್ನು ಆಯೋಜಿಸಿ ಸಮಸ್ಯೆಗಳನ್ನು ಪರಿಹರಿಸಲು ನಿರ್ದೇಶನ ನೀಡುತ್ತವೆ. ಆದರೆ, ಯಾವುದೇ ಹಣಕಾಸಿನ ನೆರವು ನೀಡುತ್ತಿಲ್ಲ ಎಂದು ಬೇಸರಿಸಿದರು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಪ್ರಸನ್ನ ಮಂಡೇಲಾ, ಪಿಡಿಒ ತ್ರಿವೇಣಿ ಮಾತನಾಡಿದರು. ಗ್ರಾಪಂ ಸದಸ್ಯರಾದ ಆರ್.ಟಿ.ನಿಂಗಣ್ಣ, ಗೀತಾವಾಣಿ, ಶಿವಣ್ಣ, ಮುಖ್ಯಶಿಕ್ಷಕ ವೈ ತಿಪ್ಪೇಸ್ವಾಮಿ, ಲಕ್ಷ್ಮೀದೇವಿ, ಗೀತಾ, ಉಷಾ, ಭಾರತಿ, ಉಮಾ, ಸಾವಿತ್ರಾ ಇತರರಿದ್ದರು.