ಎರಡು ತಿಂಗಳ ಪಡಿತರ ವಿತರಣೆಗೆ ಕ್ರಮ

P PURA PADITHARA 8 (1)
Published on

ಪರಶುರಾಮಪುರ: ಕರೊನಾ ವೈರಸ್ ಹರಡುವಿಕೆ ತಡೆಗಾಗಿ ಸರ್ಕಾರದ ನಿರ್ದೇಶನದನ್ವಯ ಅಂತ್ಯೋದಯ, ಬಿಪಿಎಲ್ ಕಾರ್ಡ್‌ದಾರರಿಗೆ ಎರಡು ತಿಂಗಳ ಪಡಿತರವನ್ನು ಒಂದೇ ಬಾರಿ ವಿತರಿಸಲಾಗುತ್ತಿದೆ ಎಂದು ಟಿ.ಎನ್.ಕೋಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಆಡಳಿತಾಧಿಕಾರಿ ಶರಣಪ್ಪ ತಿಳಿಸಿದರು.

ತಿಮ್ಮಣ್ಣನಾಯಕನಕೋಟೆ ಗ್ರಾಮದಲ್ಲಿ ಬುಧವಾರ ಅರ್ಹ ಫಲಾನುಭವಿಗಳಿಗೆ ಅಕ್ಕಿ, ಗೋಧಿ ವಿತರಿಸುವ ವೇಳೆ ಮಾತನಾಡಿದರು.

ಅಂಗವಿಕಲರು, ವಯೋವೃದ್ಧರಿಗೆ ನ್ಯಾಯಬೆಲೆ ಅಂಗಡಿಯವರೆ ಮನೆಗೆ ತೆರಳಿ ಪಡಿತರ ನೀಡುವ ವ್ಯವಸ್ಥೆ ಮಾಡಲಾಗಿದೆ. ತಾಂತ್ರಿಕ ತೊಂದರೆಯಿಂದ ಕಾರ್ಡ್ ಇಲ್ಲದಿರುವ ಅರ್ಹರಿಗೂ ಸಹ ಉಚಿತವಾಗಿ ಪಡಿತರ ವಿತರಿಸಲಾಗುತ್ತಿದೆ ಎಂದು ಹೇಳಿದರು.

ಎಲ್ಲ ನ್ಯಾಯಬೆಲೆ ಅಂಗಡಿ ಬಳಿ ಪಡಿತರದಾರರಿಗೆ ನೀರು, ನೆರಳಿನ ವ್ಯವಸ್ಥೆ ಸಹಿತ ಸಾಮಾಜಿಕ ಅಂತರದೊಂದಿಗೆ ಪಡಿತರವನ್ನು ವಿತರಿಸಲಾಯಿತು.

ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಪಿ.ಲಕ್ಷ್ಮಣ್, ಸಿಬ್ಬಂದಿ ಶಿವಕುಮಾರ, ಮುಖಂಡರಾದ ಬಸವರಾಜು, ತಿಪ್ಪಮ್ಮ, ಮುರಳಿ, ಗಿರಿಯಪ್ಪ, ಕರಿಯಪ್ಪ, ರಾಜಣ್ಣ, ತಿಪ್ಪೇಸ್ವಾಮಿ, ನಿಂಗಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net