ಟಿ.ಎನ್.ಕೋಟೇಲಿ ಮಾಸ್ಕ್ ವಿತರಣೆ

P PURA MASK 18 (1)
Published on

ಪರಶುರಾಮಪುರ: ಕರೊನಾ ವೈರಸ್ ತಡೆಯಲು ರಾಜ್ಯ ಸರ್ಕಾರ ಮಾಸ್ಕ್ ದಿನಾಚರಣೆ ಘೋಷಿಸಿದೆ ಎಂದು ತಾಲೂಕು ಪಂಚಾಯಿತಿ ಸದಸ್ಯ ಕರಡಪ್ಪ ತಿಳಿಸಿದರು.

ಸಮೀಪದ ತಿಮ್ಮಣ್ಣನಾಯಕನಕೋಟೆ ಗ್ರಾಮದಲ್ಲಿ ಗುರುವಾರ ಗ್ರಾಪಂ ಕಚೇರಿಯಲ್ಲಿ ಆಯೋಜಿಸಿದ್ದ ಮಾಸ್ಕ್ ದಿನಾಚರಣೆಯಲ್ಲಿ ಉಚಿತವಾಗಿ ಮಾಸ್ಕ್ ವಿತರಿಸಿ ಮಾತನಾಡಿದರು.

ಸಾರ್ವಜನಿಕರಲ್ಲಿ ಪರಸ್ಪರ ಅಂತರ ಕಾಪಾಡಿಕೊಂಡು, ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದನ್ನು ರೂಢಿಸಲು ಸರ್ಕಾರ ಉತ್ತಮ ಕಾರ್ಯಕ್ರಮ ಜಾರಿಗೆ ತಂದಿದೆ ಎಂದು ಶ್ಲಾಘಿಸಿದರು. ಗ್ರಾಪಂ ಸದಸ್ಯರು, ಸಿಬ್ಬಂದಿ ಮಾಸ್ಕ್ ಧರಿಸಿಕೊಂಡು ಜನ ಜಾಗೃತಿ ಜಾಥಾ ನಡೆಸಿದರು.

ಗ್ರಾಪಂ ಅಧ್ಯಕ್ಷ ಒ.ಬೈಲಪ್ಪ, ಉಪಾಧ್ಯಕ್ಷೆ ಶಿವಮ್ಮ, ಸದಸ್ಯರಾದ ನಾಗೇಂದ್ರಪ್ಪ, ಗೀತಾವಾಣಿ, ಭಾಗ್ಯಾ, ಆರ್.ಟಿ.ನಿಂಗಣ್ಣ, ಬಸವರಾಜು, ಹನುಮಂತರಾಯ, ಪ್ರಮೋದ್, ಲಲಿತಾ, ಪಿಡಿಒ ತ್ರಿವೇಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net