

ಪರಶುರಾಮಪುರ: ಆಂಧ್ರಪ್ರದೇಶ-ಕರ್ನಾಟಕ ರಾಜ್ಯ ಗಡಿಗ್ರಾಮಗಳಲ್ಲಿ ದ್ವಿಭಾಷಿಕರ ಮಧ್ಯೆ ಉತ್ತಮ ಬಾಂಧವ್ಯವಿದೆ. ಇದಕ್ಕೆ ತಾತ್ಕಾಲಿಕ ವಿರಾಮ ಹೇಳಬೇಕು ಎಂದು ವೃತ್ತ ನಿರೀಕ್ಷಕ ಇ.ಆನಂದಪ್ಪ ತಿಳಿಸಿದರು.
ಆಂಧ್ರದಲ್ಲಿ ಕರೊನಾ ಪಾಸಿಟಿವ್ ಪ್ರಕರಣ ಹೆಚ್ಚಾದ್ದರಿಂದ ಗಡಿ ಗ್ರಾಮ ದೊಡ್ಡಬಾದಿಹಳ್ಳಿಯಲ್ಲಿ ಸೋಮವಾರ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಆರೋಗ್ಯ ಜಾಗೃತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಗಡಿನಾಡ ಕನ್ನಡಿಗರ ಪಾತ್ರ ಕುರಿತ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಂಡು ಕರೊನಾ ಹತೋಟಿಗೆ ಸಹಕರಿಸಬೇಕು. ಸಂಬಂಧಿಕರನ್ನು ಭೇಟಿ ಮಾಡಲೇಬೇಕೆಂಬ ಭಾವನಾತ್ಮಕತೆ ಕೈಬಿಡಬೇಕು ಎಂದು ಸಲಹೆ ನೀಡಿದರು.
ಆಂಧ್ರ ಸಮೀಪವಿರುವ ರಾಜ್ಯದ ಸಿರಿವಾಳ-ಓಬಳಾಪುರ, ಪಾತಪ್ಪನಗುಡಿ, ದೊಡ್ಡಬಾದಿಹಳ್ಳಿ, ದಾಸರ‌್ಲಹಳ್ಳಿ, ತಿಪ್ಪಾರೆಡ್ಡಿಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಪಿಎಸ್‌ಐ ಮಹೇಶ ಹೊಸಪೇಟೆ, ಎಎಸ್‌ಐ ರವೀಂದ್ರ, ಮುಖ್ಯಪೇದೆ ಜಗಲೂರಯ್ಯ, ಸಿಬ್ಬಂದಿ ಮುರುಗೇಂದ್ರಪ್ಪ, ಗೃಹರಕ್ಷಕ ಚಲ್ಮೇಶ, ಗ್ರಾಮಸ್ಥರಾದ ತಿಪ್ಪೇಸ್ವಾಮಿ, ರಾಮಣ್ಣ, ಲಕ್ಷ್ಮೀದೇವಿ ಇತರರಿದ್ದರು.