ಕರೊನಾ ತಡೆಗೆ ಸಾಮಾಜಿಕ ಅಂತರವೇ ಮದ್ದು

P PURA SABHE 28 (1)
Published on

ಪರಶುರಾಮಪುರ: ಕರೊನಾ ತಡೆಗೆ ಸಾಮಾಜಿಕ ಅಂತರವೇ ಮದ್ದು ಎಂದು ಪಿಎಸ್‌ಐ ಮಹೇಶ ಹೊಸಪೇಟೆ ತಿಳಿಸಿದರು.

ಪೊಲೀಸ್, ಸ್ಥಳೀಯ ಆಡಳಿತದಿಂದ ಗ್ರಾಮದ ಆರಕ್ಷಕ ಠಾಣೆ ಆವರಣದಲ್ಲಿ ಹಮ್ಮಿಕೊಂಡಿದ್ದ ಕರೊನಾ ನಿಯಂತ್ರಣ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗ್ರೀನ್‌ಜೋನ್ ಪ್ರದೇಶಗಳಲ್ಲಿ ಸರ್ಕಾರ ಲಾಕ್‌ಡೌನ್‌ಗೆ ಕೆಲ ನಿರ್ಬಂಧ ವಿಧಿಸಿ ಸಡಿಲಿಕೆ ನೀಡಿದ್ದು, ಇದನ್ನು ಲೆಕ್ಕಿಸದೆ ಮದ್ಯ, ಗುಟ್ಕಾ ಮಾರಾಟ ಮಾಡಿದರೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ. ಹೇರ್ ಕಟಿಂಗ್ ಸೆಂಟರ್, ಬೀಡಾ ಅಂಗಡಿ, ಡಾಬಾ, ಹೋಟೆಲ್ ಯಾವುದೇ ಕಾರಣಕ್ಕೂ ತೆರೆಯಕೂಡದು ಎಂದು ತಿಳಿಸಿದರು.

ವರ್ತಕ ನಾಗರಾಜಶೆಟ್ಟಿ ಮಾತನಾಡಿದರು. ಪೇದೆ ಶ್ರೀನಿವಾಸ, ವರ್ತಕರಾದ ರಾಜು, ಪ್ರಭಾಕರ, ನಾಗರಾಜು, ಸಂದೀಪ, ಕಿರಣ್, ರಾಜಣ್ಣ, ನಾಗರಾಜು, ಗೋವಿಂದರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net