ಕರಗುತ್ತಿದೆ ಅಲ್ಲಾಪುರ ಅರಣ್ಯ ಪ್ರದೇಶ

ARANYA
Published on

ಪರಶುರಾಮಪುರ: ಸಂರಕ್ಷಣೆ ಕೊರತೆಯಿಂದ ಅಲ್ಲಾಪುರ ಸೇತುವೆ ಬಳಿಯ 60 ಹೆಕ್ಟೇರ್ ಅರಣ್ಯ ಪ್ರದೇಶ ನಿಧಾನ ಕರಗುತ್ತಿದೆ. ರಕ್ಷಣೆಗೆ ಮುಂದಾಗುವಂತೆ ಗ್ರಾಪಂ ಸದಸ್ಯರು ಆಗ್ರಹಿಸಿದ್ದಾರೆ.

ಪರಶುರಾಮಮಪುರ, ಚೌಳೂರು, ಅಲ್ಲಾಪುರ, ಚಟ್ಟೇಕಂಬ, ಜುಂಜರಗುಂಟೆ ವರೆಗೆ ಚಾಚಿರುವ ಅರಣ್ಯ ಈಗ ಬಯಲಾಗುತ್ತಿದೆ.

ಈ ಹಿಂದೆ ಇಲ್ಲಿ ಆಲೇಸೊಪ್ಪು, ಕವಳಿ, ಕಾರೆ ಸಿಗುತ್ತಿತ್ತು. ನವಿಲು, ಜಿಂಕೆ, ಮೊಲಗಳಿದ್ದವು.ಈಗವುಗಳ ಸಂಖ್ಯೆ ಕಡಿಮೆಯಾಗಿದೆ. ಈಗ ನೀಲಗಿರಿ ಮರಗಳು ಹೆಚ್ಚಿವೆ. ವಿವಿಧ ಜಾತಿಯ ಸಸಿಗಳನ್ನು ಬೆಳೆಸುವಂತೆ ಗ್ರಾಪಂ ಸದಸ್ಯರಾದ ಮಿಲ್ಟ್ರಿಸಿದ್ದೇಶ, ಕೃಷ್ಣಪ್ಪ, ಬೊಮ್ಮಕ್ಕ, ಯಶೋದಾ, ಜಯಲಕ್ಷ್ಮೀ ಕುಮಾರ. ಮಾಜಿ ಅಧ್ಯಕ್ಷರಾದ ಮಚ್ಚಾ ಹನುಮಂತಪ್ಪ, ಕಾಟಯ್ಯ, ಮಾರುತಿ ಇತರರು ಮನವಿ ಮಾಡಿದ್ದಾರೆ.

ಕುರುಚಲು ಗಿಡ, ನೀಲಗಿರಿ ತೆರವುಗೊಳಿಸಿ ಉಪಯುಕ್ತ ಸಸಿಗಳನ್ನು ನೆಡಲು ಕ್ರಮ ಕೈಗೊಳ್ಳಲಾಗುವುದು.
ಎಸ್.ಸುರೇಶ
ವಲಯ ಅರಣ್ಯಾಧಿಕಾರಿಗಳು, ಚಳ್ಳಕೆರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net