

ಪರಶುರಾಮಪುರ: ಮಕ್ಕಳಿಗೆ ಜಂತು ನಾಶಕ ಮಾತ್ರೆ ಕೊಡಿಸಿ ರಕ್ತಹೀನತೆ, ಅಪೌಷ್ಟಿಕತೆ, ಆತಂಕ, ಹೊಟ್ಟೆನೋವು, ವಾಕರಿಕೆ, ಅತಿಸಾರ ಇತ್ಯಾದಿ ಸಮಸ್ಯೆಗಳಿಂದ ಮುಕ್ತಗೊಳಿಸಿ ಎಂದು ಮುಖ್ಯಶಿಕ್ಷಕ ಸಿ.ತಿಪ್ಪೇಸ್ವಾಮಿ ಪಾಲಕರಿಗೆ ತಿಳಿಸಿದರು.
ದೇವರಮರಿಕುಂಟೆ ಸಹಿಪ್ರಾ ಶಾಲಾವರಣದಲ್ಲಿ ಇತ್ತೀಚೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಸಾರ್ವಜನಿಕ ಶಿಕ್ಷಣ, ಶಿಶು ಅಭಿವೃಧ್ಧಿ ಇಲಾಖೆ ವತಿಯಿಂದ ಶಾಲಾ ಮಕ್ಕಳಿಗೆ ಜಂತು ನಾಶಕ ಮಾತ್ರೆ ವಿತರಿಸಿ ಮಾತನಾಡಿದರು.
ಆರೋಗ್ಯ ನಿರೀಕ್ಷಕ ಸುಧಾಕರ ರೆಡ್ಡಿ ಮಾತನಾಡಿ, ಮಕ್ಕಳು ಉಗುರುಗಳನ್ನು ಕತ್ತರಿಸಿ ಶುಚಿಗೊಳಿಸಬೇಕು. ಶುದ್ಧ ನೀರು ಸೇವಿಸಬೇಕು. ಸುತ್ತಲಿನ ಪರಿಸರ ಶುಚಿಯಾಗಿಟ್ಟುಕೊಳ್ಳಬೇಕು. ಕಡ್ಡಾಯವಾಗಿ ಶೌಚ ಬಳಸಬೇಕು ಎಂದು ಸಲಹೆ ನೀಡಿದರು.
ಮುಖ್ಯಶಿಕ್ಷಕ ಸಿ.ತಿಪ್ಪೇಸ್ವಾಮಿ, ಆರೋಗ್ಯ ನಿರೀಕ್ಷಕ ಸುಧಾಕರ ರೆಡ್ಡಿ, ಆರೋಗ್ಯ ಕಾರ್ಯಕರ್ತೆ ದ್ಯಾಮಕ್ಕ, ಶಿಕ್ಷಕರಾದ ಎನ್.ಚಿತ್ತಯ್ಯ, ಬಸವರಾಜು, ಜಯಮ್ಮ, ಏಕಾಂತಮ್ಮ ಇತರರಿದ್ದರು.