ಪರಶುರಾಮಪುರ ಅಭಿವೃದ್ಧಿ ಅನುದಾನ

P PURA PRAGATHII 26
Published on

ಪರಶುರಾಮಪುರ: ಹೋಬಳಿ ಕೇಂದ್ರ ಪರಶುರಾಮಪುರದ ಸಮಗ್ರ ಅಭಿವೃದ್ಧಿಗೆ ತಾಲೂಕು ಪಂಚಾಯಿತಿ ಅನುದಾನ ಬಳಸಲಾಗುವುದು ಎಂದು ಚಳ್ಳಕೆರೆ ತಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ ತಿಳಿಸಿದರು.

ಗ್ರಾಮದ ಶ್ರೀಲಕ್ಷ್ಮೀ ಕೊಲ್ಲಾಪುರದಮ್ಮ ದೇಗುಲ ಸಮೀಪದ ಎಸ್ಸಿ ಕಾಲನಿಯಲ್ಲಿ ಮಿನಿ ಹೈಮಾಸ್ಟ್ ದೀಪಕ್ಕೆ ಚಾಲನೆ ನೀಡಿ ಮಾತನಾಡಿ, 2019-20ನೇ ಸಾಲಿನ ರಾಜ್ಯ ಹಣಕಾಸು ಆಯೋಗದ ಅನಿರ್ಬಂಧಿತ ಯೋಜನೆಯ 1.75 ಲಕ್ಷ ರೂ. ವೆಚ್ಚದಲ್ಲಿ ಹೈಮಾಸ್ಟ್ ಲೈಟ್ ಅಳವಡಿಸಲಾಗಿದೆ ಎಂದರು.

ಗ್ರಾಮದ ಮುಖಂಡ ಟಿ.ನಾಗರಾಜು ಮಾತನಾಡಿ, ಬಹುವರ್ಷದ ಬೇಡಿಕೆಯಾದ ಪರಶುರಾಮಪುರ ತಾಲೂಕು ಕೇಂದ್ರ ಘೋಷಣೆ ಕಾರ್ಯವನ್ನು ಸರ್ಕಾರ ಶೀಘ್ರವೇ ಸಾಕಾರಗೊಳಿಸಿ ಹೋಬಳಿ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಬೇಕೆಂದು ಮನವಿ ಮಾಡಿದರು.

ಮುಖಂಡರಾದ ಜಗದೀಶ, ನಾಗಭೂಷಣ, ಹೊರಕೇರಿ ಕೇಶವ, ತಿಪ್ಪೇಸ್ವಾಮಿ, ಪಾಲಯ್ಯ, ಶ್ರೀನಿವಾಸ, ನಾಗರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net