ಧರ್ಮಸ್ಥಳ ಸಂಸ್ಥೆ ಕಾರ್ಯ ಮಾದರಿ

P PURA SKDRDP 16 (5)
Published on

ಪರಶುರಾಮಪುರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸರ್ವ ಸಮುದಾಯದ ಏಳಿಗೆಗೆ ಶ್ರಮಿಸುತ್ತಿರುವುದು ಶ್ಲಾಘನಾರ್ಹ ಕಾರ್ಯ ಎಂದು ಚಳ್ಳಕೆರೆ ತಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ ತಿಳಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜನಮಂಗಳ ಯೋಜನೆ, ಸ್ಥಳೀಯ ಆಡಳಿತ ಹಾಗೂ ಪ್ರಗತಿಬಂಧು ಮಹಿಳಾ ಸ್ವ-ಸಹಾಯ ಸಂಘದಿಂದ ಸಮೀಪದ ದೊಡ್ಡಚೆಲ್ಲೂರು ರಂಗಮಂದಿರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಗ್ರಾಪಂ ವ್ಯಾಪ್ತಿಯ ಅಂಗವಿಕಲರಿಗೆ ಸಾಧನಾ-ಸಲಕರಣೆ ವಿತರಿಸಿ ಮಾತನಾಡಿದರು.

ಬಯಲು ಸೀಮೆಯ ರೈತರು, ಕೃಷಿ ಕಾರ್ಮಿಕರು ಹಾಗೂ ಮಹಿಳೆಯನ್ನು ಸಂಘಟಿಸಿ ಸ್ವ-ಸಹಾಯ ಸಂಘಗಳ ಮೂಲಕ ಸಾಲ-ಸೌಲಭ್ಯ ನೀಡಿ ಅವರ ಅಭ್ಯುದಯಕ್ಕೆ ಕಾರಣವಾಗಿದೆ ಎಂದರು.

ಪರಶುರಾಮಪುರ ವಲಯದ ಮೇಲ್ವಿಚಾರಕ ಬಿನೋಯ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಂಸ್ಥೆಯಿಂದ ಆರು ಅಂಗವಿಕಲರಿಗೆ ವೀಲ್‌ಚೇರ್, ಮೂವರಿಗೆ 3 ಲೆಗ್ ವಾಕಿಂಗ್ ಸ್ಟಿಕ್, ಎಲ್ಬೋ ಕ್ರಚಸ್, ಎರಡು ವಾಟರ್ ಬೆಡ್, ಮತ್ತಿತರ ಪರಿಕರಗಳನ್ನು ಉಚಿತವಾಗಿ ವಿತರಿಸಲಾಯಿತು.

ಗ್ರಾಪಂ ಅಧ್ಯಕ್ಷ ಎಲ್.ಸುರೇಶ, ಸದಸ್ಯರಾದ ಶ್ರೀದೇವಿ, ಆನಂದಪ್ಪ, ಒಕ್ಕೂಟದ ಅಧ್ಯಕ್ಷ ಮಂಜುನಾಥ, ಮುಖಂಡರಾದ ರಾಮೇಗೌಡ, ಜಯಣ್ಣ, ನಾಗರಾಜು, ಪುರಂದರ, ತಿಮ್ಮಣ್ಣ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net