ಫೀಡರ್ ಕಾಲುವೆ ಸ್ವಚ್ಛತೆಗೆ ಕ್ರಮ

P PURA BHETI 26_1
Published on

ಪರಶುರಾಮಪುರ: ಶಿಡ್ಲಯ್ಯನಕೋಟೆಯಿಂದ ಪರಶುರಾಮಪುರಕ್ಕೆ ನೀರು ಹರಿದು ಬರುವ ಫೀಡರ್ ಕಾಲುವೆಯನ್ನು ಸ್ವಚ್ಛಗೊಳಿಸುವ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಕಂದೀಕೆರೆ ಸುರೇಶಬಾಬು ತಿಳಿಸಿದರು.

ಸಮೀಪದ ಟಿಎನ್‌ಕೋಟೆ ಗ್ರಾಮಕ್ಕೆ ಭೇಟಿ ನೀಡಿ ಫೀಡರ್ ಚಾನಲ್ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಈ ಫೀಡರ್ ಕಾಲುವೆಯನ್ನು ಕೂಡಲೇ ದುರಸ್ತಿಗೊಳಿಸಿ ಈಗ ಹರಿದು ಬರುವ ನೀರು ಸರಾಗವಾಗಿ ಬರುವಂತೆ ಉಪಯುಕ್ತ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಪ್ರಯತ್ನಿಸಲಾಗುವುದು ಎಂದರು.

ತಾಪಂ ಸದಸ್ಯ ಕರಡಪ್ಪ, ಗ್ರಾಪಂ ಅಧ್ಯಕ್ಷ ಒ.ಬೈಲಪ್ಪ, ಅರ್ಚಕ ಪ್ರೊ.ಶಿವಲಿಂಗಪ್ಪ, ಕಾಂಗ್ರೆಸ್ ಮುಖಂಡ ಕಂದೀಕೆರೆ ಸುರೇಶಬಾಬು, ಕೆ.ಸಿ.ಗೌಡ್ರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net