ಶಿಡ್ಲಯ್ಯನಕೋಟೆ-ಪರಶುರಾಮಪುರ

P PURA KAALUVE 28 (1)
Published on

ಪರಶುರಾಮಪುರ: ಶಿಡ್ಲಯ್ಯನಕೋಟೆ-ಪರಶುರಾಮಪುರ ಮಾರ್ಗದ 35-40 ಕಿ.ಮೀ ಫೀಡರ್ ಚಾನಲ್‌ನ ಎಡ- ಬಲ ನಾಲೆಗಳ ದುರಸ್ತಿಗೆ ಅಚ್ಚುಕಟ್ಟು ರೈತರು ಒತ್ತಾಯಿಸಿದ್ದಾರೆ.

40 ವರ್ಷಗಳ ಹಿಂದೆ ಗೋಸಿಕೆರೆ, ಟಿ.ಎನ್.ಕೋಟೆ, ಪರಶುರಾಮಪುರ ಕೆರೆಗಳಿಗೆ ನೀರು ಹರಿಸಲು ಎಡನಾಲೆ,ರಾಣೀಕೆರೆ, ಸಿ.ಎನ್.ಹಳ್ಳಿ, ಪುರ‌್ಲೆಹಳ್ಳಿಗೆ ಹರಿಸಲು ಬಲನಾಲೆ ನಿರ್ಮಿಸಲಾಗಿತ್ತು.

15 ವರ್ಷಗಳಿಂದ ಮಳೆಯಾಗದೆ ನೀರು ಹರಿದಿರಲಿಲ್ಲ. ಈಗ ವಿವಿ ಸಾಗರದಿಂದ ನೀರು ಬಿಟ್ಟಿದ್ದು ಎಡ-ಬಲ ನಾಲೆಗಳ ಪಕ್ಕದ ರೈತರು ನೀರಿಗೆ ಕಾಲುವೆ ಒಡೆಯುತ್ತಿದ್ದಾರೆ.

ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಈಚೆಗೆ ಎಡ-ಬಲ ನಾಲೆ ದುರಸ್ತಿಗೊಳಿಸಿದ್ದರು. ಕೆಲ ಗ್ರಾಪಂಗಳು ಕಾಲುವೆಯಲ್ಲಿ ಕಸ ತೆಗೆಸಿದ್ದವು. ಆದರೆ ಮೇಲ್ವಿಚಾರಣೆ ಕೊರತೆಯಿಂದ ಸ್ವಚ್ಛತೆ ಕಾರ್ಯ ಕಳಪೆಯಾಗಿದೆ. ಬಹುತೇಕ ಕಡೆ ಹೂಳು ತುಂಬಿದೆ.

ಹೂಳು ತೆಗೆಸುವ ಜತೆಗೆ ನಾಲೆ ದುರಸ್ತಿಪಡಿಸುವಂತೆ ತಾಪಂ ಸದಸ್ಯ ಕರಡಪ್ಪ, ಗ್ರಾಪಂ ಸದಸ್ಯರಾದ ಭಾಗ್ಯಾ, ಗೀತಾ ವಾಣಿ, ಸಣ್ಣಿಂಗಪ್ಪ, ಪ್ರಸನ್ನಕುಮಾರ, ಕೃಷ್ಣಪ್ಪ, ಬೊಮ್ಮಕ್ಕ, ತಿಪ್ಪೇಸ್ವಾಮಿ, ಕಿಚ್ಚ ಸುದೀಪ್ ಬಳಗದ ಅಧ್ಯಕ್ಷ ಸುಧಾಕರ, ಜಿಪಂ ನಾಮನಿರ್ದೇಶಿತ ಸದಸ್ಯ ಜಯವೀರಾಚಾರಿ ಒತ್ತಾಯಿಸಿದ್ದಾರೆ.

ಅಧ್ಯಕ್ಷ, ಗ್ರಾಪಂ, ಪರಶುರಾಮಪುರ

ಎಂ.ಆರ್.ರುದ್ರೇಶ್

ಪರಶುರಾಮಪುರ ಭಾಗದ ನಾಲೆಗಳನ್ನು ದುರಸ್ತಿಗೊಳಿಸಿದರೆ ವಿವಿ ಸಾಗರದಿಂದ ಫೀಡರ್ ಚಾನಲ್ ಮೂಲಕ ಹರಿದು ಬರುವ ನೀರು ಗ್ರಾಮದ ಎರಡು ಕೆರೆಗಳಿಗೆ ಹರಿಯಲಿದೆ.

ಫೀಡರ್ ಚಾನಲ್‌ನಲ್ಲಿ ಬೆಳೆದ ಗಿಡ ತೆರವುಗೊಳಿಸಲಾಗಿದೆ. ನರೇಗಾದಡಿ ಹೂಳು ತೆಗೆಸಿ ನೀರು ಸರಾಗ ಹರಿಯಲು ಸ್ಥಳೀಯ ಆಡಳಿತ ವ್ಯವಸ್ಥೆ ಮಾಡಿದೆ.
ತ್ರಿವೇಣಿ ಪಿಡಿಒ
ತಿಮ್ಮಣ್ಣನಾಯಕನಕೋಟೆ ಗ್ರಾಪಂ
====

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net