ನಾಳೆ ‘ಪರಶುರಾಮ’ ನಾಟಕ ಪ್ರದರ್ಶನ

1
Published on

ಮೈಸೂರು: ಸಂಚಲನ ಮೈಸೂರು ರಂಗ ತಂಡವು ಫೆ.8ರಂದು ಸಂಜೆ 7 ಗಂಟೆಗೆ ಕಲಾಮಂದಿರದಲ್ಲಿ ‘ಪರಶುರಾಮ’ ನಾಟಕ ಪ್ರದರ್ಶನ ಆಯೋಜಿಸಿದೆ.


ಡಾ.ಜೀವನ್ ರಾಂ ಸುಳ್ಯ ನಿರ್ದೇಶನದಲ್ಲಿ ಕಾರ್ಕಳದ ಯಕ್ಷ ರಂಗಾಯಣ ಕಲಾವಿದರು ಅಭಿನಯಿಸಿದ್ದಾರೆ. ಶಶಿರಾಜ್ ಕಾವೂರು ನಾಟಕ ರಚಿಸಿದ್ದಾರೆ ಎಂದು ಸಂಚಲನ ಅಧ್ಯಕ್ಷ ದೀಪಕ್ ಮೈಸೂರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಿರ್ದೇಶಕ ಡಾ.ಜೀವನ್ ರಾಂ ಸುಳ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್ ಪ್ರದರ್ಶನ ವೀಕ್ಷಿಸಲಿದ್ದಾರೆ ಎಂದರು.


ಪರಶುರಾಮ ಪುರಾಣದಲ್ಲಿ ಬರುವ ಮಹೋನ್ನತ ಪಾತ್ರ, ಸಮಸ್ತ ಭೂಮಂಡಲಕ್ಕೆ 21 ಸಲ ಪ್ರದಕ್ಷಿಣೆ ಹಾಕಿ, ದುಷ್ಟರ ನಾಶ ಮಾಡಿದ ಧೀರಮುನಿ. ಕರ್ಮ ಭೂಮಿಯನ್ನೇ ಪುಣ್ಯಭೂಮಿಯನ್ನಾಗಿ ಪರಿವರ್ತಿಸಿ ಹೊಸ ನಾಡನ್ನು ಕಟ್ಟಿ ಬೆಳೆಸಿದ ಮಹಾಮುನಿ ಪರಶುರಾಮ. ಅವರ ಕಥೆಯನ್ನು ಪ್ರೇಕ್ಷಕರ ಮುಂದೆ ಪ್ರಸ್ತುತಪಡಿಸಲಾಗುತ್ತದೆ ಎಂದರು.
ಇದೇ ವೇಳೆ ಗಣ್ಯರು ನಾಟಕದ ಪೋಸ್ಟರ್ ಬಿಡುಗಡೆ ಮಾಡಿದರು. ರಂಗಕರ್ಮಿ ರಾಜಶೇಖರ ಕದಂಬ, ಕೆಎಸ್‌ಸಿಎ ಮೈಸೂರು ವಿಭಾಗದ ಮಾಜಿ ಸಂಚಾಲಕ ಸುಧಾಕರ ರೈ, ನಟ ಮನ್ವಿತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net